ಶಿರಾಡಿ: ಬಸ್ಸಿನ ಟಯರ್ ಸ್ಪೋಟ-ಮಹಿಳೆಗೆ ಗಾಯ

0

ನೆಲ್ಯಾಡಿ: ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಟಯರ್ ಸ್ಪೋಟಗೊಂಡು ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಫೆ.27ರಂದು ಮಧ್ಯಾಹ್ನ ನಡೆದಿದೆ.


ಹಾಸನ ನಿವಾಸಿ ಶ್ರೀಮತಿ ಶಮಂತ ಗಾಯಗೊಂಡವರಾಗಿದ್ದಾರೆ. ಇವರು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಿದ್ದ ಕೆ.ಎಸ್.ಆರ್.ಟಿ ಬಸ್(ಕೆಎ19, ಎಫ್3218) ಕಡಬ ತಾಲೂಕಿನ ಶಿರಾಡಿ ಎಂಬಲ್ಲಿಗೆ ತಲುಪಿದಾಗ ಬಸ್‌ನ ಚಾಲಕನ ಬದಿಯ ಹಿಂಭಾಗದ ಟಯರ್ ಸ್ಟೋಟಗೊಂಡಿದ್ದರಿಂದ ಟಯರ್‌ನ ಮೇಲ್ಬಾಗದ ಕವರ್ ಕಳಚಿ ಶ್ರೀಮತಿ ಶಮಂತ ಅವರಿಗೆ ಗಾಯವಾಗಿದೆ. ಇವರನ್ನು ಚಿಕಿತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಹಾಸನ ನಿವಾಸಿ ಕಿರಣ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 26/2024 ಕಲಂ: 337 ಭಾ.ದಂ.ಸಂ. ನಂತ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here