ಬಡಗನ್ನೂರುಃ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಶ್ರೀ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಫೆ .28 ರಂದು ಬೆಳಗ್ಗೆ ಗಣಹೋಮ, ಗುರುಪೂಜೆ ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯ ಧರ್ಮ ಚಾವಡಿಯಲ್ಲಿ ನವಕ ಕಲಶ ಪ್ರಧಾನಹೋಮ,ಅಲಂಕಾರ ಪೂಜೆ, ಮಹಾಪೂಜೆ ಮಧ್ಯಾಹ್ನ 12.30 ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ, ಧೂಮಾವತಿ ಬಲಿ ಸೇವೆ, ಮೂಲಸ್ಥಾನ ಗರಡಿಯಲ್ಲಿ ಶುದ್ಧ ಕಲಶ ಕ್ರಿಯೆಗಳು, ಸತ್ಯ ಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ.ನಡೆದು ರಾತ್ರಿ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು, ರಾತ್ರಿ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಪ್ರಸಾದ ವಿತರಣೆ , ಅನ್ನಸಂತರ್ಪಣೆ, ಬೈದರ್ಕಳ ನೇಮೋತ್ಸವ, ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಉಡುಪಿ ಕ್ಷೇತ್ರ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್ , ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಜಾತ್ರೋತ್ಸವ ಕಾರ್ಯಧ್ಯಕ್ಷರಾದ ಶೈಲೇಂದ್ರ ವೈ ಸುವರ್ಣ, ಗೌರವಾಧ್ಯಕ್ಷ ಜಯಂತ ನಡುಬೈಲ್, ಮುಕ್ತೇಸರ ಶ್ರೀಧರ ಪೂಜಾರಿ, ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ರಕ್ಷಿತ್ ಶಿವರಾಂ ಬೆಳ್ತಂಗಡಿ, ವಿಜಯಕುಮಾರ್ ಸೊರಕೆ. ಪುತ್ತೂರು. ವರದರಾಜ ಉಪ್ಪಿನಂಗಡಿ ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ.ಜಗದೀಶ್ಚಂದ್ರ ಡಿ.ಕೆ , ಚಂದ್ರಶೇಖರ ಉಚ್ಚಿಲ, ನವೀನ್ ಅಮೀನ್ ಶಂಕರಪುರ, ಹರಿಶ್ಚಂದ್ರ ಅಮೀನ್ ಕಟಪಾಡಿ, ಶೇಖರ ಬಂಗೇರ ಬೆಳ್ತಂಗಡಿ ,ನಾರಾಯಣ ಮಚ್ಚಿನ , ಯುವ ವಾಣಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ. ,ಆತ್ಮ ಶಕ್ತಿ ಬ್ಯಾಂಕ್ ಅಧ್ಯಕ್ಷ, ಚಿತ್ತರಂಜನ್ ಬೋಳಾರ್, ಮೆಸ್ಕಾಂ ಇಂಜಿನಿಯರ್ ಶಿವಶಂಕರ್, ಜಯರಾಮ ಬಂಗೇರ, ಸುರೇಶ್ ಕೋಟ್ಯಾನ್ ಮೂಡಬಿದಿರಿ. ಚಲನಚಿತ್ರ ನಟ ವಿನೋದ್ ಆಳ್ವಮೂಡಾಯೂರು, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು,ಪಡುಮಲೆ ಕುತ್ಯಾಳಪಾದೆ ಮಹಾವಿಷ್ಣು ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಅನಗ್ ಆಳ್ವ ಮೂಡಾಯೂರು, ಹಾಗೂ ಊರಿನವರು ಭಾಗವಹಿಸಿದ್ದರು.
ಭಕ್ತ ಮಹಾಸಾಗರ :-ದೇಯಿಬೈದೆತಿ ಮಾತೆ ಮಕ್ಕಳ ಪುನೀತ ಸಮಾಗಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಪುನೀತರಾದರು.
ಅನ್ನದಾನ:- ಸುಮಾರು 10 ಸಾವಿರ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಭೋಜನ ಸ್ವೀಕರಿಸಿದರು.