ಮಾ.3: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ 8ನೇ ವರ್ಷದ ನರ್ತನಾವರ್ತನ-2024 – ಡಾ| ಹರಿಕೃಷ್ಣ ಪಾಣಾಜೆ ಅವರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಾಂಸ್ಕೃತಿಕ ಸಚಿವಾಲಯದ ಸಹಕಾರದೊಂದಿಗೆ 8ನೇ ವರ್ಷದ ‘ನರ್ತನಾವರ್ತನಾ -2024’ ಮಾ.3ರಂದು ಸಂಜೆ ಗಂಟೆ 5.3೦ಕ್ಕೆ ಬಪ್ಪಳಿಗೆ ಜೈನ ಭವನದಲ್ಲಿ ನಡೆಯಲಿದೆ. ಪ್ರತಿ ವರ್ಷದಂತೆ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭರತನಾಟ್ಯ ಕಲಾವಿದರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಇದರ ಜೊತೆಗೆ ಸಭಾ ಕಾರ್ಯಕ್ರಮದಲ್ಲಿ ಕಲೆ ಆರಾಧಕರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದುಷಿ ಪ್ರೀತಿಕಲಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭರತನಾಟ್ಯ ಪ್ರಸ್ತುತಿ:
ಅಂತರಾಷ್ಟ್ರೀಯ ಖ್ಯಾತಿಯ ಮತ್ತು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರು ಮೂಲದ ಪಿ.ಪ್ರವೀಣ್ ಕುಮಾರ್ ಅವರಿಂದ ಭರತನಾಟ್ಯ ಪ್ರಸ್ತುತಿ “ಸಖ” ಪ್ರದರ್ಶನಗೊಳ್ಳಲಿದೆ. ಇವರಿಗೆ ನಟುವಾಂಗದಲ್ಲಿ ಬೆಂಗಳೂರಿನ ಕೆ.ಎನ್.ನವ್ಯಶ್ರೀ, ಹಾಡುಗಾರಿಕೆಯಲ್ಲಿ ಆಋ ರಘುರಾಮ್, ಮೃದಂಗದಲ್ಲಿ ಭವಾನಿಶಂಕರ್, ಕೊಳಲಿನಲ್ಲಿ ರಘುಸಿಂಹ ಅವರು ಸಹಕರಿಸಲಿದ್ದಾರೆ ಎಂದು ವಿದುಷಿ ಪ್ರೀತಿಕಲಾ ಅವರು ತಿಳಿಸಿದರು.

ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ಕಲಾಶ್ರಯ ಪ್ರಶಸ್ತಿ:
ಸಂಜೆ ಗಂಟೆ 5.30ಕ್ಕೆ ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರು ಮಾಡಲಿದ್ದಾರೆ. ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎಂ.ಡಿ.ಡಾ.ಸುಧಾ ಎಸ್ ರಾವ್ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಪುತ್ತೂರಿನಲ್ಲಿ ಕಲೆಯ ಆರಾಧಾಕರು ಮತ್ತು ಪೋಷಕರಾಗಿರುವ ಎಸ್‌ಡಿಪಿ ರೆಮಿಡಿಸ್ ಆಂಡ್ ರಿಸರ್ಚ್ ಸೆಂಟರ್‌ನ ಮ್ಯಾನೆಂಜಿಂಗ್ ಡೈರೆಕ್ಟರ್ ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ‘ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.

ಆಮಂತ್ರಣಕ್ಕೆ ತುಳು ಲಿಪಿಯ ಟಚ್
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನರ್ತನಾವರ್ತನ ಆಮಂತ್ರಣ ಪತ್ರದಲ್ಲಿ “ನರ್ತನಾವರ್ತನ” ಪದವನ್ನು ತುಳು ಲಿಪಿಯಲ್ಲಿ ಬರೆಯಲಾಗಿದ್ದು. ತುಳು ಭಾಷೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಈ ಆಮಂತ್ರಣ ಎಲ್ಲರಿಗೂ ಮಾದರಿಯಾಗಲಿದೆ.

LEAVE A REPLY

Please enter your comment!
Please enter your name here