ಮಾ. 4: ‘ನೂರೇ ಅಜ್ಮೀರ್ ‘ ಆಧ್ಯಾತ್ಮಿಕ ಸಂಗಮ – 15ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

0

ಪುತ್ತೂರು : ಸುನ್ನಿ ಸಂಘಟನೆಗಳಾದ ಎಸ್ಕೆಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್.ಗಾಳಿಮುಖ ಶಾಖೆ ಇದರ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್ ಕಾರ್ಯಕ್ರಮ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’ ಕಾರ್ಯಕ್ರಮವು ಮಾ. 4 ರಂದು ಗಾಳಿಮುಖ ಬದ್ರ್ ಜುಮ್ಮಾ ಮಸೀದಿಯ ಪರಿಸರದ ಶಂಸುಲ್ ಉಲಮಾ ನಗರದಲ್ಲಿ ಜರಗಲಿದೆ ಎಂದು ದಾರಿಮೀಸ್ ಸೆಂಟ್ರಲ್ ಕಮಿಟಿ ಜೊತೆ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


ಕೇರಳದ ಖ್ಯಾತ ವಿದ್ವಾಂಸ, ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನಡೆಯುವ ಈ ‘ನೂರೇ ಅಜ್ಮೀರ್” ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದವರು ಹೇಳಿದರು.
ಮಾ. 4 ರಂದು ಸಂಜೆ ಗಂಟೆ 4 30 ಕ್ಕೆ ಸ್ಥಳೀಯ ಜಮಾಅತ್ ಅಧ್ಯಕ್ಷ ಮಾಹಿನ್ ದಾರಿಮಿ ಅವರು ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬಳಿಕ ಫಾರೂಕ್ ದಾರಿಮಿ ಅವರ ನೇತೃತ್ವದಲ್ಲಿ ಪುದಿಯ ವಲಪ್ಪು ಮಖಾಂ ಝಿಯಾರತ್ ಹಾಗೂ ಹಕೀಂ ತಂಞಳ್ ಆದೂರು ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಹಾಗೂ ಶಂಸುದ್ದೀನ್ ದಾರಿಮಿ ಅನುಸ್ಮರಣಾ ಭಾಷಣ ನಡೆಸುವರು.


ರಾತ್ರಿ ಗಂಟೆ 8 ರಿಂದ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ “ನೂರೇ ಅಜ್ಮೀರ್” ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಗಾಳಿ ಮುಖ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಯಅಕೂಬ್ ಸಿ.ಎಚ್.ಅವರು ವಹಿಸಲಿದ್ದಾರೆ. ಸಯ್ಯದ್ ಝೈನುಲ್ ಆಬಿದೀನ್ ತಂಞಳ್ ಕುನ್ನುಂಗೈ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದು, ಗಾಳಿ ಮುಖ ಶಂಸುಲ್ ಉಲಮಾ ಸ್ಮಾರಕ ದರ್ಸ್ ಮುದರಿಸ್ ಆದಂ ದಾರಿಮಿ ಅವರು ಭಾಷಣ ಮಾಡಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹಾಗೂ ಸಮಾರಂಭದಲ್ಲಿ ಹಲವಾರು ಉಲಮಾ, ಸಾದಾತ್ ಗಳು, ಸಾಮಾಜಿಕ ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ನಾಯಕರು ಭಾಗವಹಿಸುವರು ಎಂದವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ರಿಯಾಝ್ ಗಾಳಿ ಮುಖ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಯಾಕೂಬ್ ಸಿ.ಎಚ್, ಜೊತೆ ಕಾರ್ಯದರ್ಶಿ ಹಾರಿಸ್ ಅಸ್ನವಿ, ಎಸ್ಕೆಎಸ್ಸೆಸ್ಸೆಫ್ ಸದಸ್ಯ ಸಹನವಾಝ್ ಗಾಳಿಮುಖ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here