2 ವರ್ಷ ಹಿಂದೆ ಅಯೋಧ್ಯೆಗೆ ತೆರಳಿ ನಾಪತ್ತೆಯಾದ ಕೆಯ್ಯೂರಿನ ಬಾಲಕೃಷ್ಣ ಶೆಟ್ಟಿ- ಪತ್ತೆಗೆ ಪೊಲೀಸ್ ಮನವಿ

0

ಪುತ್ತೂರು: ಎರಡು ವರ್ಷದ ಹಿಂದೆ ಅಯೋಧ್ಯೆಗೆ ತೆರಳಿ ನಾಪತ್ತೆಯಾದ ಕೆಯ್ಯೂರು ಗ್ರಾಮದ ದೇರಾಜೆ ಮನೆಯ ಬಾಲಕೃಷ್ಣ ಶೆಟ್ಟಿ(66ವ) ಎಂಬವರು ಇನ್ನೂ ಪತ್ತೆಯಾಗಿಲ್ಲ. ಬಾಲಕೃಷ್ಣ ಶೆಟ್ಟಿಯವರ ಗುರುತು ಪತ್ತೆಯಾದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.


ವಿವರ:
ಬಾಲಕೃಷ್ಣ ಶೆಟ್ಟಿಯವರು ದಿನಾಂಕ 03/02/2022 ರಂದು ಬೆಳಿಗ್ಗೆ 8.00 ಗಂಟೆಗೆ ಅಯೋಧ್ಯೆಗೆ ಹೋಗುತ್ತೇನೆ ಎಂದು ತಿಳಿಸಿ ಮನೆಯಿಂದ ಹೊರಟು ರೈಲಿನಲ್ಲಿ ತೆರಳಿ ಅಯೋಧ್ಯೆಗೆ ತಲುಪಿದ ನಂತರ ಅಳಿಯ ದಿನೇಶ್‌ ರೈ ಯವರಿಗೆ ಕರೆ ಮಾಡಿದ್ದು, ಆನಂತರ ಅಯೋಧ್ಯೆಯಿಂದ 15 ದಿನಗಳವರೆಗೆ ಬಾಲಕೃಷ್ಣ ಶೆಟ್ಟಿಯವರ ಮೊಬೈಲ್‌ ನಿಂದ ಮಗಳು ದೀಪಾ ಬಿ ಶೆಟ್ಟಿ ರವರ ಮೊಬೈಲ್‌ ಗೆ ಕರೆ ಮಾಡಿಕೊಂಡಿದ್ದರು ಆ ನಂತರದಲ್ಲಿ ಫೋನ್‌ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಹೇಳಿ ಫೋನ್‌ ಕರೆ ಕಟ್‌ ಮಾಡಿದ್ದು ಮರಳಿ ದೀಪಾ ರವರು ಫೋನ್‌ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎಂದು ತಡವಾಗಿ ದೂರು ನೀಡಿದ್ದರು.

ಬಾಲಕೃಷ್ಣ ಶೆಟ್ಟಿ ಬಿಳಿ ಮೈಬಣ್ಣ ಹೊಂದಿದ್ದು, 152ಸೆ.ಮೀ ಎತ್ತರ, ಕಪ್ಪು ಬಿಳಿ ಮಿಶ್ರಿತ ಕೂದಲು, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ತುಳು ಭಾಷೆ ಮಾತನಾಡಬಲ್ಲರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ಅ.ಕ್ರ 87/2023 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here