ಮಾ.3 :ಹರಕೆ ರೂಪದ ಅಗೇಲು ಸೇವೆಗೆ ಹೆಸರು ಪಡೆದ ಇರ್ದೆ ಉಳ್ಳಾಕುಲು ಮೈಸಂದಾಯ ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ನೇಮೋತ್ಸವ

0

ಪುತ್ತೂರು: ಹರಕೆ ರೂಪದ ಅಗೇಲು ಸೇವೆಗೆ ಹೆಸರು ಪಡೆದ ಬೆಟ್ಟಂಪಾಡಿ ಗ್ರಾಮದ ಇರ್ದೆ ಶ್ರೀ ಉಳ್ಳಾಕುಲು ಮೈಸಂದಾಯ ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಮಾ.3 ರಂದು ನೇಮೋತ್ಸವ ನಡೆಯಲಿದೆ.

ಬೆಳಿಗ್ಗೆ ನಾಗದೇವರ ತಂಬಿಲ, ಗಣಹೋಮ, ಉಳ್ಳಾಕುಲು ಮೈಸಂದಾಯ ಪೊಟ್ಟಭೂತ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ವರ್ಣರ ಪಂಜುರ್ಲಿ ಭಂಡಾರ ತೆಗೆದು ನೇಮೋತ್ಸವ, ರಾತ್ರಿ ಕಲ್ಲುರ್ಟಿ, ಕಲ್ಕುಡ, ಗುಳಿಗ, ಧೂಮಾವತಿ ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ರಾಮಣ್ಣ ಪೂಜಾರಿ ಇರ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here