ಬಡಗನ್ನೂರುಃ ಪಡುಮಲೆ ಕುತ್ಯಾಳ ಶ್ರೀ ಮಹಾವಿಷ್ಣು ದೇವಸ್ಥಾನದ 20 ನೇ ವರ್ಷದ ವಾರ್ಷಿಕ ಜಾತ್ರೋತ್ಸವವು ಮಾ.2 ಶನಿವಾರದಿಂದ ಮೊದಲ್ಗೊಂಡು ಮಾ.4 ಸೋಮವಾರದ ತನಕ ಕುಂಟಾರು ವೇಧಮೂರ್ತಿ ಶ್ರೀ ವಾಸುದೇವ ತಂತ್ತಿಯವರ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮ ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮಗಳು
ಮಾ.2 ರಂದು ಸಂಜೆ ಗಂ 6 ರಿಂದ ಉಗ್ರಾಣ ಮುಹೂರ್ತ, ಅತ್ತಾಳ ಪೂಜೆ ,ಮಾ.3 ರಂದು ಪೂರ್ವಾಹ್ನ ಗಂ 9 ರಿಂದ ಗಣಪತಿ ಹೋಮ,ನವಕಾಭಿಷೇಕ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿರುವುದು. ಸಂಜೆ ಗಂ 6 ರಿಂದ ಶ್ರೀ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ ರಾತ್ರಿ ಗಂ 7 ರಿಂದ ರಂಗಪೂಜೆ, ಶ್ರೀ ದೇವರ ನೃತ್ಯ ಬಲಿ, ಬಳಿಕ ಭೂತಬಲಿ, ಮಾ.4 ರಂದು ಪೂರ್ವಾಹ್ನ ಗಂ 10 ರಿಂದ ದರ್ಶನ ಬಲಿ, ಬಟ್ಡಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮ:-
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.3 ರಂದು ಸಂಜೆ ಗಂ 7 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆತ ಬೊಳ್ಳಿ ಡಾ: ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ ನಟಿಸಿರುವ ನಾಟಕ ಪುದರ್ ದೀರ್ತಾಂಡ್ ತುಳು ಹಾಸ್ಯಮಯ ನಾಟಕ ನಡೆಯಲಿದೆ.