ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ-ಗ್ರಾ.ಪಂ ಸಿಬ್ಬಂದಿಗಳಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

0

ಉಪ್ಪಿನಂಗಡಿ: ಗ್ರಾ.ಪಂ. ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಚಳವಳಿಯಂಗವಾಗಿ ಉಪ್ಪಿನಂಗಡಿ, 34 ನೆಕ್ಕಿಲಾಡಿ ಹಾಗೂ ಹಿರೇಬಂಡಾಡಿ ಗ್ರಾ.ಪಂ.ನಲ್ಲೂ ಸಿಬ್ಬಂದಿ ಪ್ರತಿಭಟನಾರ್ಥವಾಗಿ ಮಾ.1ರಂದು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಉಪ್ಪಿನಂಗಡಿ

ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಸಿಬ್ಬಂದಿ ಶ್ರೀನಿವಾಸ್, ಮಹಾಲಿಂಗ ಕಜೆಕ್ಕಾರ್, ರಕ್ಷಿತ್, ಇಕ್ಬಾಲ್, ಜ್ಯೋತಿ, ಆಶಾ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ನೆಕ್ಕಿಲಾಡಿ

34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಸಿಬ್ಬಂದಿ ವಸಂತಿ, ಸುಶೀಲಾ, ಚಿತ್ರಾವತಿ, ಶಾರಿಕಾ, ಯಶೋಧಾ, ನಿತಿನ್ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಹಿರೇಬಂಡಾಡಿ

ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಸಿಬ್ಬಂದಿ ಸೋಮನಾಥ, ಲೊಕೇಶ್, ಚೈತ್ರಾ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here