ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 24ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಹಾಗೂ ಆರೋಗ್ಯ ರಕ್ಷಾ ಸಮಿತಿಯಿಂದ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರದ 24ನೇ ವೈದ್ಯಕೀಯ ಶಿಬಿರವು ಮಾ.3ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದೇವಸ್ಥಾನ ಅರ್ಚಕ ಮೋಹನ ರಾವ್ ಮಾತನಾಡಿ, ಕಳೆದ ಇಪ್ಪತ್ತಮೂರು ತಿಂಗಳುಗಳಿಂದ ನಡೆಯುವ ಉಚಿತ ಆರೋಗ್ಯ ಶಿಬಿರದ ಮೂಲಕ ಸಾವಿರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಶಿಬಿರವು ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಉಚಿತ ವೈದ್ಯಕೀಯ ಶಿಬಿರದ ಆರೋಗ್ಯ ರಕ್ಷಾ ಸಮಿತಿಗೆ ಎರಡು ವರ್ಷ ಪೂರೈಸಿದೆ. ವ್ಯವಸ್ಥಾಪನಾ ಸಮಿತಿಯ ಅವಧಿಯು ಪೂರ್ಣಗೊಂಡಿದೆ. ಹೊಸ ಸಮಿತಿ ಬಂದ ಬಳಿಕ ಆರೋಗ್ಯ ರಕ್ಷಾ ಸಮಿತಿಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುವುದು. ದೇವರ ಅನುಗ್ರಹ ಹಾಗೂ ಎಲ್ಲರ ಸಹಕಾರ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ತಜ್ಞ ವೈದ್ಯೆ ಡಾ.ಸ್ವಾತಿ, ಸತ್ಯನಾರಾಯಣ ಪೂಜಾ ಸಮಿತಿ ಸಂತೋಷ್ ಮುಕ್ರಂಪಾಡಿ, ಮೊಟ್ಟೆತ್ತಡ್ಕ ಐಕ್ಯ ಕಲಾಡಸೇವಾ ಟ್ರಸ್ಟ್‌ನ ಖಜಾಂಚಿ ದಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಪಿ ಪರೀಕ್ಷಾ ಮೆಷಿನ್ ಕೊಡುಗೆ:
ವೈದ್ಯಕೀಯ ಶಿಬಿರಕ್ಕೆ ಮೊಟ್ಟೆತ್ತಡ್ಕ ಐಕ್ಯ ಕಲಾ ಸೇವಾ ಟ್ರಸ್ಟ್ ನಿಂದ ಸುಮಾರು ರೂ.10 ಸಾವಿರ ಮೊತ್ತದ ಬಿ.ಪಿ ಪರೀಕ್ಷೆ ಮಾಡುವ ಯಂತ್ರ ಕೊಡುಗೆ ನೀಡಿರುವುದಾಗಿ ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.
ಜಯಲಕ್ಷ್ಮಿ ಶಗ್ರಿತ್ತಾಯ ಪ್ರಾರ್ಥಿಸಿದರು. ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ನವಚೇತನಾ ಯುವಕ ಮಂಡಲದ ಉಮೇಶ್ ಎಸ್.ಕೆ., ವಂದಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರಭಾವಳಿ ಸಮರ್ಪಣೆ:
ದೇವಸ್ಥಾನದ ವತಿಯಿಂದ ಶಾಸ್ತಾರ ದೇವರಿಗೆ ನಿರ್ಮಿಸಲಾದ ಪ್ರಭಾವಳಿಯನ್ನು ಇದೇ ಸಂದರ್ಭದಲ್ಲಿ ದೇವರಿಗೆ ಸಮರ್ಪಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ವಿನ್ಯಾಸ್ ಯು.ಎಸ್., ಪ್ರೇಮ, ಆರೋಗ್ಯ ರಕ್ಷಾ ಸಮಿತಿಯ ಹರಿಣಿ ಪುತ್ತೂರಾಯ ಹಾಗೂ ಸಂತೋಷ ಮುಕ್ರಂಪಾಡಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳು ವಿತರಿಸಲಾಗುವುದು. ತಜ್ಞ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬುವತಜ್ಞ ಡಾ. ಸಚಿನ್ ಶಂಕರ್ ಹಾರಕೆರೆ, ತಜ್ಞ ವೈದ್ಯೆ ಡಾ. ಸ್ವಾತಿ, ಆಯುರ್ವೇದ ತಜ್ಞರಾದ ಡಾ. ಸಾಯಿ ಪ್ರಕಾಶ್, ಡಾ.ಗ್ರೀಷ್ಮಾ ಭಾಗವಹಿಸಿ ತಪಾಸಣೆ ನಡೆಸಿಕೊಟ್ಟರು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಶಿಬಿರದ ಯಶಸ್ವಿನಲ್ಲಿ ಸಹಕಸಿದರು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here