ಲಯನ್ಸ್ ಇಂಟರ್‌ನ್ಯಾಷನಲ್ ವಲಯ 6ರ ಏಳು ಕ್ಲಬ್‌ಗಳ ಸಮಾಗಮದ ಪ್ರಾಂತ್ಯ ಸಮ್ಮೇಳನ “ಲಾರ್ಯ”

0

ಮಾನವ ವ್ಯಕ್ತಿತ್ವವೇ ಶ್ರೇಷ್ಟ ಸಂಪತ್ತು-ಪ್ರಿಯಲತಾ ಡಿ’ಸಿಲ್ವ

ಪುತ್ತೂರು: ಭಾರತ ದೇಶದಲ್ಲಿ ಬದುಕುವ ನಾವು ವೈವಿಧ್ಯತೆಗಾಗಿ ಏಕತೆ ಎಂಬ ಮೂಲ ಮಂತ್ರದೊಂದಿಗೆ ನಾವು ಸಾಗಬೇಕಿದೆ. ಮನುಷ್ಯನ ಶ್ರೇಷ್ಠ ಸಂಪತ್ತು ಎಂದರೆ ಅದು ಮಾನವನ ವ್ಯಕ್ತಿತ್ವ. ಸಮಾಜದಲ್ಲಿ ಇದೇ ವ್ಯಕ್ತಿತ್ವದ ಪರಿಚಯವಾಗಬೇಕಿದೆ ಎಂದು ಪ್ರಾಂತೀಯ ಸಮ್ಮೇಳನದ ರೀಜನ್ ಚೇರ್‌ಪರ್ಸನ್ ಲ್ಯಾನ್ಸಿ ಮಸ್ಕರೇನ್ಹಸ್ ಎಂಜೆಎಫ್‌ರವರ ಪತ್ನಿ ಪ್ರಾಂತ್ಯದ ಪ್ರಥಮ ಮಹಿಳೆ, ಉಪನ್ಯಾಸಕಿ ಪ್ರಿಯಲತಾ ಡಿ’ಸಿಲ್ವರವರು ಹೇಳಿದರು.

ಮಾ.2ರಂದು ಕೃಷ್ಣನಗರ ಬನ್ನೂರು ಸಂತ ಅಂತೋನಿ ಚರ್ಚ್ ಎದುರುಗಡೆಯ ಓರಿಯೆಂಟಲ್ ಕ್ಯಾಶ್ಯೂ ಇಂಡಸ್ಟ್ರೀಸ್ ಆವರಣದಲ್ಲಿ ಜರಗಿದ ಲಯನ್ಸ್ ಪುತ್ತೂರು, ಪುತ್ತೂರ್‍ದ ಮುತ್ತು, ಲಯನ್ಸ್ ವಿಟ್ಲ, ಲಯನ್ಸ್ ಮಾಣಿ, ಲಯನ್ಸ್ ಕಾವು, ಲಯನ್ಸ್ ಪಾಣಾಜೆ, ಲಯನ್ಸ್ ಆಲಂಕಾರು ದುರ್ಗಾಂಬಾ ಒಳಗೊಂಡ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಡಿ, ವಲಯ ಆರರ ಪ್ರಾಂತೀಯ ಸಮ್ಮೇಳನ “ಲಾರ್ಯ” ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ತನ್ನ 46ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಿಸಿ ಮಾತನಾಡಿದರು. ಭಾರತೀಯ ದೇಶವು ಕೇವಲ ಪರಂಪರೆಗೆ ಹಾಗೂ ಸಂಸ್ಕೃತಿಗೆ ಸೀಮಿತವಲ್ಲ, ಅವರವರ ಧರ್ಮವೇ ಶ್ರೇಷ್ಟವಾಗಿದೆ.

ಸಮಾಜದಲ್ಲಿ ನಾವು ಬದುಕಬೇಕು, ಅದಕ್ಕಾಗಿ ಬದುಕು ಕಟ್ಟಿಕೊಳ್ಳಬೇಕು. ಲಯನ್ಸ್ ಸೇವಾ ಸಂಸ್ಥೆಯು ಸುಂದರ ಸಮಾಜ ಕಟ್ಟುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದೆ. ಸಮಾಜದ ಬದಲಾವಣೆಗೆ ದೊಡ್ಡ ದೊಡ್ಡ ಸೇವೆಯನ್ನು ಮಾಡುವುದರ ಬದಲಿಗೆ ಸಣ್ಣಪುಟ್ಟ ಕಾರ್ಯಗಳನ್ನು ಮಾಡುವ ಮೂಲಕ ನೂತನ ಸಮಾಜದ ನಿರ್ಮಾಣವನ್ನು ಮಾಡೋಣ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದು ಮನೆ' ಎಂಬ ವಿಶ್ವವಿದ್ಯಾಲಯದಲ್ಲಿ-ತೋನ್ಸೆ ವಿಜಯಕುಮಾರ್ ಶೆಟ್ಟಿ: ಮುಖ್ಯ ಅತಿಥಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ ಮಾತನಾಡಿ, ಇಂದಿನ ಯುವ ಜನಾಂಗ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳುವಲ್ಲಿ ಲಯನ್ಸ್ ಕ್ಲಬ್ ಶ್ರಮಿಸುವಂತಾಗಬೇಕು. ಪ್ರತಿಯೋರ್ವರು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದುಮನೆ’ ಎಂಬ ವಿಶ್ವವಿದ್ಯಾಲಯದಲ್ಲಿ. ಮಕ್ಕಳನ್ನು ಓದುವ ಮೆಷಿನ್ ಗಳನ್ನಾಗಿ ಮಾಡದೆ ಅವರಿಗೆ ಬದುಕುವ ಶಿಕ್ಷಣವನ್ನು ಕಲಿಸುವಂತಾಗಬೇಕು ಎಂದರು.

ಲಯನ್ಸ್ ಕ್ಲಬ್ ಸೇವೆಗಾಗಿ ಮುಡಿಪಾಗಿಟ್ಟುವ ಸಂಸ್ಥೆಯಾಗಿದೆ-ಕಾವು ಹೇಮನಾಥ ಶೆಟ್ಟಿ:
ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಎಂಜೆಎಫ್ ಕಾವು ಹೇಮನಾಥ ಶೆಟ್ಟಿರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಾಲ್ಕು ಕಂದಾಯ ಜಿಲ್ಲೆಯನ್ನೊಳಗೊಂಡ ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ಸುಮಾರು 15 ಲಕ್ಷ ಸದಸ್ಯರನ್ನು ಹೊಂದಿದ್ದು ಸಮಾಜ ಸೇವೆಗಾಗಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿರುತ್ತಾರೆ. ಲಯನ್ಸ್ ಕ್ಲಬ್ ಸೇವೆಗಾಗಿ ಮುಡಿಪಾಗಿಟ್ಟುವ ಸಂಸ್ಥೆಯಾಗಿದ್ದು ಕ್ಲಬ್‌ನಲ್ಲಿ ಒಳ್ಳೆಯ ಸಾಂಗತ್ಯದ ಉದ್ಧೇಶವನ್ನು ಹೊಂದಿದೆ. ಈ ಕ್ಲಬ್ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಆತ್ಮಸಂತೋಷವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿದೆ ಎಂದರು.

ಲಯನ್ಸ್ ಸದಸ್ಯರು ಬದ್ಧತೆ, ಸಮರ್ಪಣಾಭಾವದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ-ವಂ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಲಯನ್ಸ್ ಎಂಬುದು ಸೇವೆಗೋಸ್ಕರ ಇರುವಂತಹ ಪ್ರತಿಷ್ಠಾನ. ಜಾಗತಿಕವಾಗಿ ೪೬ ಸಾವಿರ ಕ್ಲಬ್‌ಗಳಿಂದ ಸುಮಾರು 15 ಲಕ್ಷ ಸದಸ್ಯರು ಸಮಾಜದ ಏಳಿಗೆಕ್ಕೋಸ್ಕರ ಸೇವೆ ನೀಡುತ್ತಿದ್ದಾರೆ. ಈ ಲಯನ್ಸ್ ಕ್ಲಬ್ ಸದಸ್ಯರು ಒಂದು ಕುಟುಂಬದಂತೆ ಸೇವೆಯ ಸಂಭ್ರಮವನ್ನು ಆಚರಿಸುತ್ತಿದೆ. ನಾಯಕನಾದವರು ಪದನಿಮಿತ್ತ ಗೌರವಕ್ಕಿಂತ ಪ್ರತಿಭೆಯೊಂದಿಗೆ ಗುರುತಿಸಿ ಗೌರವವನ್ನು ಹೊಂದಬೇಕಾಗುತ್ತದೆ. ಲಯನ್ಸ್ ಸದಸ್ಯರು ಬದ್ಧತೆ ಹಾಗೂ ಸಮರ್ಪಣಾಭಾವದೊಂದಿಗೆ ಕಾರ್ಯಪ್ರವೃತ್ತರಾಗುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ ಎಂದರು.

ಲ್ಯಾನ್ಸಿರವರ ಪತ್ನಿ ಪ್ರಿಯಲತಾರವರು ಜಿಲ್ಲೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ-ಮೆಲ್ವಿನ್ ಡಿ’ಸೋಜ:
ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜ ಮಾತನಾಡಿ, ಲಯನ್ಸ್ ಕ್ಲಬ್‌ನ ಎಲ್ಲಾ ಸೇವಾ ವಿಭಾಗಗಳಲ್ಲಿ ಅತ್ತ್ಯುತ್ತಮ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಮಾಜ ಸೇವೆಯಲ್ಲಿ ಹಾಗೂ ನಾಯಕತ್ವದಲ್ಲಿ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಉತ್ತಮವಾಗಿ ನಿಭಾಯಿಸಿದ್ದಾರೆ. ಲ್ಯಾನ್ಸಿರವರ ಪತ್ನಿ ಪ್ರಿಯಲತಾರವರೂ ಕೂಡ ಜಿಲ್ಲೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಿಯಲತಾರವರು ಲಿಯೋ ಕ್ಲಬ್‌ನ ಉತ್ತಂಗತೆಯಲ್ಲಿ ಕೈಜೋಡಿಸಿದ್ದಾರೆ ಎಂದರು.

ಲ್ಯಾನ್ಸಿರವರ ಕುಟುಂಬ ಲಯನ್ಸ್ ಸಂಸ್ಥೆಯಲ್ಲಿ ಸೇವೆ ನೀಡುತ್ತಿರುವುದು ಶ್ಲಾಘನೀಯ-ಅನಿಲ್ ಲೋಬೊ:
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್ ಲೋಬೊ ಮಾತನಾಡಿ, ಸರ್ವಧರ್ಮೀಯರನ್ನು ಒಳಗೊಂಡ ಈ ಸಂಘಟನೆಯ ಮುಖಾಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ವಿಚಾರ. ಲಯನ್ಸ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯಹಸ್ತ ನೀಡುತ್ತಾ ಬಂದಿದೆ. ನನ್ನ ಆತ್ಮೀಯರಾದ ಲ್ಯಾನ್ಸಿ ಕುಟುಂಬ ಲಯನ್ಸ್ ಸಂಸ್ಥೆಯಲ್ಲಿ ಸೇರಿಕೊಂಡು ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಅಭಿನಂದನೆ:
ಎಂಜೆಎಫ್ ಪದವಿಗೆ ಭಾಜನರಾದ ಲಯನ್ಸ್ ಕ್ಲಬ್ ಪುತ್ತೂರು ಇದರ ಕೃಷ್ಣಪ್ರಶಾಂತ್, ಗಣೇಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಸದಾಶಿವ ನಾಕ್, ಲಯನ್ಸ್ ವಿಟ್ಲದ ವಿನ್ನಿ ಮಸ್ಕರೇನ್ಹಸ್, ಜೆಸಿಂತಾ ಮಸ್ಕರೇನ್ಹಸ್, ಲೀನಾ ರೊಡ್ರಿಗಸ್, ಜಲಜಾಕ್ಷಿ ಬಾಲಕೃಷ್ಣ, ಪುಷ್ಪಲತಾ, ಲಯನ್ಸ್ ಪುತ್ತೂರು ಕಾವು ಇದರ ಅನಿತಾ ಹೇಮನಾಥ ಶೆಟ್ಟಿರವರನ್ನು ಅಭಿನಂದಿಸಲಾಯಿತು.

ಸೇವಾ ಕಾರ್ಯಗಳು:
ಲಯನ್ಸ್ ಪುತ್ತೂರು ಕಾವು ವತಿಯಿಂದ ಕಾವು ಸರಕಾರಿ ಶಾಲೆಗೆ ಫ್ಯಾನ್, ಓರ್ವ ಫಲಾನುಭವಿಗೆ ಮಿಕ್ಸರ್ ಗ್ರೈಂಡರ್, ಲಯನ್ಸ್ ವಿಟ್ಲ ಕ್ಲಬ್ ವತಿಯಿಂದ ಓರ್ವ ಬಾಲಕಿಗೆ ಮೂತ್ರಪಿಂಡ ಕಸಿಕಟ್ಟುವಿಕೆಗೆ ರೂ.25 ಸಾವಿರ, ಲಯನ್ಸ್ ಪುತ್ತೂರ್ದ ಮುತ್ತು ವತಿಯಿಂದ ಪಡೀಲು ಚೈತನ್ಯ ಮಿತ್ರವೃಂದದ ಕಟ್ಟಡ ನಿಧಿ ಸಹಾಯಾರ್ಥವಾಗಿ ರೂ.10 ಸಾವಿರ ಅನ್ನು ಹಸ್ತಾಂತರಿಸಲಾಯಿತು.
ಲಯನ್ಸ್ ಪಿಡಿಜಿ ಡಾ.ಗೀತಪ್ರಕಾಶ್, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿ, ಲಯನ್ಸ್ ರೀಜನ್ ಅಂಬಾಸಡರ್ ಗಣೇಶ್ ಶೆಟ್ಟಿ, ವಲಯ ಒಂದರ ಚೇರ್‌ಪರ್ಸನ್ ವಿನ್ನಿ ಮಸ್ಕರೇನ್ಹಸ್, ವಲಯ ಎರಡರ ಚೇರ್‌ಪರ್ಸನ್ ಬಿ.ಪಾವನರಾಮ, ರೀಜನ್ ಕೋ-ಆರ್ಡಿನೇಟರ್ ಮೊಹಮದ್ ಇಕ್ಬಾಲ್, ವಲಯ ಒಂದರ ಕೋ-ಆರ್ಡಿನೇಟರ್ ಡಾ.ಶ್ರೀನಾಥ್ ಆಳ್ವ, ವಲಯ ಎರಡರ ಕೋ-ಆರ್ಡಿನೇಟರ್ ದಯಾನಂದ್ ರೈ ಮನವಳಿಕೆಗುತ್ತು, ಲಯನ್ಸ್ ವಿಟ್ಲ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ, ಲಯನ್ಸ್ ಮಾಣಿ ಅಧ್ಯಕ್ಷ ಕೂಸಪ್ಪ ಪೂಜಾರಿ ಪಿ, ಲಯನ್ಸ್ ಪುತ್ತೂರು ಕಾವು ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ಲಯನ್ಸ್ ಅಲಂಕಾರು ದುರ್ಗಾಂಬಾ ಅಧ್ಯಕ್ಷ ಪ್ರಶಾಂತ್ ರೈ ಎಂ, ವಿಟ್ಲ ಲಿಯೋ ಕ್ಲಬ್ ಅಧ್ಯಕ್ಷ ಮೊಹಮದ್ ಶಹ್ಲನ್, ಲಿಯೋ ಕ್ಲಬ್ ಪುತ್ತೂರ್‍ದ ಮುತ್ತು ಅಧ್ಯಕ್ಷೆ ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್, ಲಿಯೋ ಕ್ಲಬ್ ಶ್ರೀ ರಾಮಕೃಷ್ಣ ಅಧ್ಯಕ್ಷ ಶ್ರೀಶ ಎನ್.ನಾಯಕ್, ಲಯನ್ಸ್ ಪುತ್ತೂರ್‍ದ ಮುತ್ತು ಅಧ್ಯಕ್ಷ ಎನ್.ರವೀಂದ್ರ ಪೈ, ಕಾರ್ಯದರ್ಶಿ ಮೋಹನ್ ನಾಯಕ್ ಎಸ್, ಕೋಶಾಧಿಕಾರಿ ಮೊಹಮದ್ ಹನೀಫ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲಯನ್ಸ್ ವಲಯ ಆರರ ಏಳು ಕ್ಲಬ್‌ಗಳು ಬ್ಯಾನರ್ ಪ್ರದರ್ಶನ ಹಾಗೂ ಪ್ರಶಸ್ತಿ ವಿತರಣೆ, ನೋಂದಣಿ ಸಮಿತಿ ವರದಿ ಹಾಗೂ ಅದೃಷ್ಟ ವ್ಯಕ್ತಿ ಬಹುಮಾನ ವಿತರಣೆ ಜರಗಿತು. ಸ್ನೇಹ ಪ್ರೀತಿ ಪ್ರಾರ್ಥಿಸಿದರು. ಪ್ರೇಮಲತಾ ರಾವ್, ಸಿಂಧು ಸಂತೋಷ್ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ವೇದಾವತಿ ಮುಕ್ವೆ, ಶ್ರೀಪ್ರಸಾದ್ ಪಾಣಾಜೆ, ಲೆರಿಸ್ಸ ಮಸ್ಕರೇನ್ಹಸ್, ದಯಾನಂದ ರೈ ಕೋರ್ಮಂಡ, ರಂಜಿತಾ ಶೆಟ್ಟಿ, ಡಾ.ಹರಿದಾಸ್ ಭಟ್, ಸುಧೇಶ್ ಭಂಡಾರಿ, ರವಿಪ್ರಸಾದ್ ಶೆಟ್ಟಿರವರು ವಿವಿಧ ಕಾರ್ಯಕ್ರಮ ನೆರವೇರಿಸಿದರು. ಲಯನ್ ಶಶಿಧರ್ ಪಳಂಗಯ ಹಾಗೂ ಲಿಯೋ ಡಾ.ವಜಿದಾಬಾನುರವರು ಕಾರ್ಯಕ್ರಮ ನಿರೂಪಿಸಿದರು. ಕಾನ್ಫರೆನ್ಸ್ ಸಮಿತಿ ಕಾರ್ಯದರ್ಶಿ ಗಣೇಶ್ ಶೆಟ್ಟಿ ವಂದಿಸಿದರು.

`ಲಾರ್ಯ’ ಗೌರವದ ಕಿರೀಟ..
ನನ್ನ ಮೇಲಿನ ಭಾವನೆ ಹಾಗೂ ಪ್ರೀತಿ ಇಟ್ಟು ಪ್ರಾಂತ್ಯ ಅಧ್ಯಕ್ಷರನ್ನಾಗಿ ಜಿಲ್ಲಾ ಗವರ್ನರ್‌ರವರು ನೇಮಕ ಮಾಡಿರುವುದು ಖುಶಿ ತಂದಿದೆ. ತನ್ನ ಮೂರನೇ ಮಗಳ ನಾಮಾಂಕಿತವನ್ನು ಈ ಕಾರ್ಯಕ್ರಮಕ್ಕೆ ನೀಡಿದ್ದೇನೆ ಯಾಕೆಂದರೆ ಲಾರ್ಯ ಅಂದರೆ ಅದು ಗೌರವದ ಕಿರೀಟವಾಗಿದೆ. ಲಯನ್ಸ್ ಈ ನನ್ನ ಪಯಣದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದೇನೆ ಎಂಬ ಹೆಮ್ಮೆಯಿದೆ. ಲಯನ್ಸ್ ಅಂದರೆ ಅದು ಸೇವೆ. ಈ ಸೇವಾ ಮನೋಭಾವ ಇದ್ದಾಗ ಲಯನ್ಸ್‌ನಲ್ಲಿ ಸೇವೆಗೈಯಲು ಸಾಧ್ಯ. ನಾವು ಕಟ್ಟಕಡೆಯ ವ್ಯಕ್ತಿಗೆ ಸೇವೆಗೈಯುವ ಮೂಲಕ ನಮ್ಮ ಸೇವಾನೋಭಾವವನ್ನು ಪ್ರಸ್ತುತಪಡಿಸೋಣ.
-ಲ್ಯಾನ್ಸಿ ಮಸ್ಕರೇನ್ಹಸ್, ರೀಜ್ಹನ್ ಚೇರ್‌ಪರ್ಸನ್ ಹಾಗೂ ಸಮ್ಮೇಳನದ ರೂವಾರಿ

ಧ್ವಜಾರೋಹಣ/ಅವರೋಹಣ..
ಲಯನ್ಸ್ ಕ್ಲಬ್ ವಿಟ್ಲ ಇದರ ಬಾಲಕೃಷ್ಣ ಗೌಡರವರು ಗೌರವ ವಂದನೆಯೊಂದಿಗೆ ರಾಷ್ಟ್ರ ಧ್ವಜವನ್ನು ವೇದಿಕೆಗೆ ತಂದು ವೇದಿಕೆಯಲ್ಲಿ ಮೊದಲೇ ಅಳವಡಿಸಿದ ಜಾಗದಲ್ಲಿ ಸ್ಥಾಪಿಸಿಡಲಾಗಿದ್ದು ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ಸಭಾ ಕಾರ್ಯಕ್ರಮದ ಕೊನೆಗೆ ರಾಷ್ಟ್ರಧ್ವಜವನ್ನು ಅವರೋಹಣಗೊಳಿಸಲಾಯಿತು. ಜೆಸಿಂತಾ ಮಸ್ಕರೇನ್ಹಸ್‌ರವರು ಧ್ವಜವಂದನೆಯನ್ನು ನೆರವೇರಿಸಿದರು. ಇತ್ತೀಚೆಗೆ ಅಗಲಿದ ಲಯನ್ ಪ್ರಕಾಶ್ ಕುಮಾರ್‌ರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ಮೂಲಕ ಒಂದು ನಿಮಿಷದ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಸನ್ಮಾನ..
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ, ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜ ದಂಪತಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್ ಲೋಬೊ, ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್-ಪ್ರಿಯಾಲತಾ ಡಿ’ಸಿಲ್ವ ದಂಪತಿ, ಕಾನ್ಫರೆನ್ಸ್ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಆತಿಥೇಯ ಕ್ಲಬ್ ಆಗಿರುವ ಲಯನ್ಸ್ ಪುತ್ತೂರ್‍ದ ಮುತ್ತು ಅಧ್ಯಕ್ಷ ಎನ್.ರವೀಂದ್ರ ಪೈ, ಕಾರ್ಯದರ್ಶಿ ಮೋಹನ್ ನಾಯಕ್, ಕೋಶಾಧಿಕಾರಿ ಮೊಹಮದ್ ಹನೀಫ್, ಸ್ಪಂದನಾ ಸೇವಾನಿಧಿ ಟ್ರಸ್ಟ್ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಸುಮಿತ್ರರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here