ಪುತ್ತೂರು: ತುಳುವೆರೆ ಮೇಳೊದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ

0

ಪುತ್ತೂರು: ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ತುಳುವೆರೆ ಮೇಳೊ ಸಂದರ್ಭದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ಪದ್ಮಾ ಕೆ.ಆರ್ ಆಚಾರ್ಯರವರ ಸಾರಥ್ಯದಲ್ಲಿ ತುಳು ಭಾಷೆಯಲ್ಲಿ ಗಣೇಶ್ ಕೊಲೆಕಾಡಿ ವಿರಚಿತ “ಸಮರ ಸೌಗಂಧಿಕಾ” ಪ್ರಸಂಗದ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ, ಸಿಂಚನಾ ಮೂಡುಕೋಡಿ, ಚೆಂಡೆ-ಮದ್ದಳೆಗಳಲ್ಲಿ, ಮಾ|ಅದ್ವೈತ ಕನ್ಯಾನ, ಮಾ|ಅದ್ವೈತ ಕೃಷ್ಣ, ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ (ಭೀಮ1), ಶುಭಾ ಪಿ ಆಚಾರ್ಯ (ಭೀಮ2), ಜಯಲಕ್ಷ್ಮಿ ವಿ ಭಟ್ (ದ್ರೌಪದಿ), ಹೀರಾ ಉದಯ್ (ಹನುಮಂತ), ಶ್ರೀವಿದ್ಯಾ ಜೆ ರಾವ್ (ಕುಬೇರ), ಶ್ರುತಿ ವಿಸ್ಮಿತ್ (ವನಪಾಲಕ) ಅರ್ಥದಾರಿಗಳಾಗಿ ಭಾಗವಹಿಸಿದರು.

LEAVE A REPLY

Please enter your comment!
Please enter your name here