ಅಧ್ಯಕ್ಷ: ಚೆನ್ನಪ್ಪ ರೈ ಬಳಜ್ಜ, ಪ್ರ.ಕಾರ್ಯದರ್ಶಿ: ಎಸ್.ಮಾಧವ ರೈ ಕುಂಬ್ರ, ಕೋಶಾಧಿಕಾರಿ: ಕೆ.ಜಯಶೀಲ ರೈ ,ಜತೆ ಕಾರ್ಯದರ್ಶಿ: ಕೆ.ಸತೀಶ್ ರೈ ಪುನರಾಯ್ಕೆ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಇದರ ವಾರ್ಷಿಕ ಮಹಾಸಭೆಯು ಫೆ.3 ರಂದು ಕುರಿಯ ಏಳ್ನಾಡುಗುತ್ತು ದೈವಸ್ಥಾನದಲ್ಲಿ ಆರಾಧನಾ ಸಮಿತಿಯ ಅಧ್ಯಕ್ಷರಾದ ಎಂ.ಬಿ.ಚೆನ್ನಪ್ಪ ರೈ ಬಳಜ್ಜ, ಕುರಿಯ ಮಾಡಾವು ಏಳ್ನಾಡುಗುತ್ತುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್ ಮಾಧವ ರೈ ಕುಂಬ್ರರವರು ಸ್ವಾಗತಿಸಿ 2023 -24ನೇ ಸಾಲಿನ ವರದಿ ವಾಚಿಸಿ ಲೆಕ್ಕಪತ್ರ ಮಂಡನೆ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ರವರು ಮಾತನಾಡಿ, ಆರಾಧನಾ ಸಮಿತಿಯಲ್ಲಿರುವ ಪ್ರಸ್ತುತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು 2 ವರ್ಷದಲ್ಲಿ ಕುಟುಂಬದ ಸಹಕಾರದೊಂದಿಗೆ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಮುಂದಿನ ಬಾರಿಗೂ ಇವರುಗಳನ್ನೆ ಮುಂದುವರಿಸುವುದು ಸೂಕ್ತ ಎಂದು ತಿಳಿಸಿದರು. ಕೆ ಯಂ ವಿಶ್ವನಾಥ ರೈ ಮಾಡಾವುರವರು ಮಾತನಾಡಿ, ಮುಂದಿನ ದಿನಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪೂರ್ಣ ಸಹಕಾರದೊಂದಿಗೆ ಸಮಿತಿಯು ಒಳ್ಳೆ ರೀತಿಯಿಂದ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆ ಜಯಶೀಲ ರೈ ಕುರಿಯ ಏಳ್ನಾಡುಗುತ್ತು, ಕೆ ಸತೀಶ್ ರೈ ಕುರಿಯ ಏಳ್ನಾಡುಗುತ್ತು, ವಿನೋದ್ ಕುಮಾರ್ ರೈ ಕುರಿಯ, ಕೆ ಶಶಿಕಲಾ ಯಸ್ ರೈ ಕುರಿಯ, ಕೆ ಭಾಸ್ಕರ ರೈ ಕುರಿಯ, ಮಂಜುನಾಥ ರೈ ನಂಜೆ, ಚಂದ್ರ ಶೇಖರ ರೈ ನಂಜೆ, ಆಶಾಲತಾ ಯಂ ರೈ ಕುಂಬ್ರ, ವಿಶಾಲಾಕ್ಷಿ ವಿ ರೈ ಕುರಿಯ, ಶೋಭಾ ವಿ ರೈ ಕುರಿಯ, ಸುಗುಣ ಬಿ ಹೆಗ್ಡೆ ಕುರಿಯ, ಟಿ ಪ್ರದೀಪ್ ಸಂಪ್ಯ, ನಯನ ಪ್ರದೀಪ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.