ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಅಷ್ಟಮಿ 2ನೇ ಮಖೆಕೂಟ ಮಾ.3ರಂದು ವೇ.ಮೂ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಾತ್ರಿ 8.30ರಿಂದ ಬಲಿ ಹೊರಟು ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ ನಡೆಯಿತು. ಮಾ.4ರಂದು ಪ್ರಾತಃಕಾಲದಲ್ಲಿ ತೀರ್ಥ ಸ್ನಾನ ನಡೆದು, ಬೆಳಗ್ಗೆ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಸೇವೆಗಳು ನಡೆಯಿತು. ಬಳಿಕ ಶ್ರೀ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡಲಾಯಿತು, ಮಧ್ಯಾಹ್ನ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.3ರ ರಾತ್ರಿ ಸ್ವರ ಸಿಂಚನ ಸುಗಮ ಸಾಹಿತ್ಯ ಬಳಗ ಸುಳ್ಯ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, ಗಯಾಪದ ಕಲಾವಿದೆರ್ ಉಬಾರ್ ಇವರಿಂದ ʻಮುರಳಿ ಈ ಪಿರ ಬರೊಲಿ’ ತುಳು ಹಾಸ್ಯಮಯ ನಾಟಕ ಜರಗಿತು.
ಈ ಸಂದರ್ಭ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ರಾಧಾಕೃಷ್ಣ ನಾಕ್, ರೂಪೇಶ್ ರೈ ಅಲಿಮಾರ್, ವಿದ್ಯಾಧರ ಜೈನ್, ಹರಿರಾಮಚಂದ್ರ ರಾಮನಗರ, ಸುದರ್ಶನ್, ಕೃಷ್ಣರಾವ್ ಆರ್ತಿಲ, ಚಿದಾನಂದ ನಾಯಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ಯು.ಜಿ.ರಾಧಾ, ಕೈಲಾರು ರಾಜಗೋಪಾಲ ಭಟ್, ಗೋಪಾಲ ಹೆಗ್ಡೆ, ಡಾ. ನಿರಂಜನ್ ರೈ, ದೇವಿದಾಸ ರೈ, ಡಾ. ರಮ್ಯಾ ರಾಜಾರಾಮ್, ಅನುರಾಧ ಆರ್. ಶೆಟ್ಟಿ ಉಪಸ್ಥಿತರಿದ್ದರು. ದೇವಾಲಯ ವ್ಯವಸ್ಥಾಪಕ ವೆಂಕಟೇಶ್ ರಾವ್, ಕೃಷ್ಣಪ್ರಸಾದ್ ಬಡಿಲ, ಪದ್ಮನಾಭ, ದಿವಾಕರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.