ಅಧ್ಯಕ್ಷೆ: ಮಲ್ಲಿಕಾ ಜೆ.ರೈ, ಕಾರ್ಯದರ್ಶಿ: ರೋಹಿಣಿ ಆಚಾರ್ಯ
ಪುತ್ತೂರು: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ವತಿಯಿಂದ ಆರಂಭವಾದ ಪುತ್ತೂರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಲೀಜನ್‌ನ ಪದಗ್ರಹಣವು ಇತ್ತೀಚೆಗೆ ಪುತ್ತೂರು ಅಶ್ಮಿ ಕಂಫರ್ಟ್ ಹಾಲ್ ನಲ್ಲಿ ನಡೆಯಿತು . ಅಧ್ಯಕ್ಷರಾಗಿ ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ, ಕಾರ್ಯದರ್ಶಿಯಾಗಿ ಎಂಪಿ ರೋಹಿಣಿ ಆಚಾರ್ಯ, ಕೋಶಾಧಿಕಾರಿಯಾಗಿ ಸುಮಂಗಲ ಶೆಣೈ ಹಾಗೂ 16 ಜನ ಉಪಾಧ್ಯಕ್ಷರು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.