





ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಆಡಳಿತ ಸಮಿತಿಯ ಸದಸ್ಯರಿಗೆ ಸಂಸ್ಥೆ ವತಿಯಿಂದ ನೀಡಲಾದ ರಿಪೋರ್ಟ್ ಡೈರಿ ಇದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.ಸಮಿತಿಯ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹಾನ್ ಹಾಜಿ ಅವರು ಸದಸ್ಯರಾದ ಯೂಸುಫ್ ಹಾಜಿ ಕೈಕಾರ ಅವರಿಗೆ ಡೈರಿ ಯನ್ನು ನೀಡುವ ಮೂಲಕ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಲಾಯ್ತು.


ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ನೂತನ ಅಡಳಿತ ಸಮಿತಿಯು ಸಂಸ್ಥೆಯ ಸಮಗ್ರ ಅಭಿವ್ರದ್ದಿಯ ಹಿತದ್ರಷ್ಠಿಯಿಂದ ವಿಶಿಷ್ಟ ವ್ಯವಸ್ಥೆಯೊಂದಿಗೆ ರಚನೆ ಮಾಡಿದ ಈ ಡೈರಿ ಸಂಸ್ಥೆಯ ಬೆಳವಣಿಗೆಯಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ.






ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಶೀದ್ ಝೈನಿ,ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ,ಕೋಶಾಧಿಕಾರಿ ಸಾಜ ಯೂಸುಫ್ ಗೌಸಿಯಾ, ಅನ್ವರ್ ಹುಸೇನ್ ಗೂಡಿನ ಬಳಿ,ಆಶಿಕುದ್ದೀನ್ ಅಖ್ತರ್,ಕರೀಂ ಕಾವೇರಿ ಮುಂತಾದವರು ಉಪಸ್ಥಿತರಿದ್ದರು ಎಂದು ಮೀಡಿಯಾ ಮರ್ಕಝ್ ಪ್ರಕಟಣೆಯಲ್ಲಿ ತಿಳಿಸಿದೆ









