ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 3ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು – ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ‘ಗ್ರಾಮ ಚಲೋ’ ಕಾರ್ಯಾಗಾರದಲ್ಲಿ ಸತೀಶ್ ಕುಂಪಲ

0

ಮೂರ್‍ನಾಲ್ಕು ದಿನದಲ್ಲಿ ನಮ್ಮ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆಯಾಗಲಿದೆ
ನಮ್ಮ ಮನಸುಗಳು ಗಟ್ಟಿಯಾಗಿರಲಿ
ಇದು ಕ್ಷೇತ್ರಕ್ಕೆ ಸೀಮಿತವಾದ ಚುನಾವಣೆಯಲ್ಲ
ಪದಾಧಿಕಾರಿಯಿಲ್ಲದಿದ್ದರೂ ಬಿಜೆಪಿ ಕೆಲಸ ಕಾರ್ಯ ಮಾಡುತ್ತದೆ
ಪುತ್ತೂರಿನಲ್ಲಿ ನಿಮ್ಮ ನಿಮ್ಮೊಳಗೆ ಆತಂಕದ ವಾತಾವರಣದ ರೀತಿಯಲ್ಲಿದ್ದೀರಿ

ಪುತ್ತೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಲೀಡ್ ಕೊಡುವಂತಹ ಕೆಲಸವನ್ನು ಪುತ್ತೂರಿನಲ್ಲಿ ಮಾಡುತ್ತೇವೆ ಎಂದು ಎಲ್ಲಾ ಕಾರ್ಯಕರ್ತರು ಕರೆ ಮಾಡಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಿಲ್ಲೆಯಲ್ಲಿ 3ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದೆ ಗೆಲ್ಲುತ್ತೇವೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಾಲ ಅವರು ಹೇಳಿದರು.
ಲೋಕಸಭೆ ಚುನಾವಣೆ ಹಿನ್ನಲೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ಮಾ.4ರಂದು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಗ್ರಾಮ ಚಲೋ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಲೋಕಸಭಾ ಚುನಾವಣೆಗೆ ಈಗಾಗಲೇ 195 ಅಭ್ಯರ್ಥಿಗಳ ಘೋಷಣೆ ಆಗಿದೆ. ಇನ್ನು ಮೂರುನಾಲ್ಕು ದಿನಗಳಲ್ಲಿ ನಮ್ಮ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಆಗಲಿದೆ. ನಾವು ಚುನಾವಣೆಗೆ ಇಳಿದು ಆಗಬೇಕು. ನಿಲ್ಲುವ ಹಾಗೆ. ನಮ್ಮ ಮನಸ್ಸು ಗಟ್ಟಿ ಇರಲಿ ಎಂದ ಅವರು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆಂಬ ಹಿನ್ನೆಲೆಯಲ್ಲಿ ಸಾಕಷ್ಟು ವರ್ಷ ನಾವು ಹೋರಾಟ ಮಾಡಿದ ಬಳಿಕ ಅವರು ಪ್ರಧಾನಿಯಾಗಿ 10 ವರ್ಷ ಪೂರ್ಣ ಅವರು ಪ್ರಧಾನ ಮಂತ್ರಿಯಾಗಿ ಕೆಲಸ ಕಾರ್ಯ ಮಾಡಿದ್ದಾರೆ. ಮತ್ತೆ 2024ನೇ ಸಾಲಿನಲ್ಲಿ ಅವರು ಪ್ರಧಾನ ಮಂತ್ರಿಯಾಗಬೇಕೆಂಬ ಹಿನ್ನೆಲೆಯಲ್ಲಿ ಸಾಕಷ್ಟು ಸಮಯಗಳಿಂದ ಕೆಲಸ ಕಾರ್ಯ ಮಾಡಲಾಗುತ್ತಿದೆ. ಅಂತಿಮ ಹಂತದಲ್ಲಿ ಉತ್ಸಾಹದಿಂದ ಕೆಲಸ ಮಾಡುವ ಕುರಿತು ಪುತ್ತೂರಿನಿಂದ ತುಂಬಾ ಜನ ಫೋನ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯನ್ನು ಈ ಬಾರಿ ಅತ್ಯಂತ ಯಶಸ್ವಿಯಾಗಿ ಪುತ್ತೂರು ಭಾರಿ ದೊಡ್ಡ ಪ್ರಮಾಣದಲ್ಲಿ ಲೀಡ್ ಕೊಡುವಂತಹ ಕೆಲಸವನ್ನು ಪುತ್ತೂರಿನಲ್ಲಿ ಮಾಡುತ್ತೇವೆ ಎಂದು ಎಲ್ಲಾ ಕಾರ್ಯಕರ್ತರು ಹೇಳಿದ್ದಾರೆ. ನಾವು ಜಿಲ್ಲೆಯಲ್ಲಿ 3ಲಕ್ಷಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಲೋಕಸಬಾ ಚುನಾವಣೆಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದ ಅವರು ಗ್ರಾಮ ಚಲೋ ಕಾರ್ಯಕ್ರಮ ಒಂದು ತಿಂಗಳ ಹಿಂದೆ ಸಮಾಪನಗೊಳಿಸಬೇಕಾಗಿತ್ತು. ಗ್ರಾಮ ಚಲೋ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಬೇಕು. ಬೂತ್, ಮತದಾರರ ಪಟ್ಟಿ ಪರಿಶೀಲನೆ, ಗೋಡೆಬರಹ, ಶಕ್ತಿವಂದನ ಕಾರ್ಯಕ್ರಮಗಳು ನಾಲ್ಕೈದು ದಿನಗಳೊಳಗೆ ಮುಗಿಸಬೇಕು. ಇನ್ನು ಕೆಲವೆ ದಿನದಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಮತ್ತೆ ಈ ಕಾರ್ಯಕ್ರಮ ಮಾಡಲು ಆಗುವುದಿಲ್ಲ. ಪುತ್ತೂರಿನಲ್ಲಿ ನಿಮ್ಮ ನಿಮ್ಮೊಳಗೆ ಆತಂಕದ ವಾತಾವರಣ ರೀತಿಯಲ್ಲಿದ್ದೀರಿ. ಗೊಂದಲ ಬಿಟ್ಟು ಚುನಾವಣೆಯ ಉತ್ಸಾಹ ಮೈಗೂಡಿಸಿಕೊಳ್ಳಿ ಎಂದರು.

ಇದು ಕ್ಷೇತ್ರಕ್ಕೆ ಸೀಮಿತವಾದ ಚುನಾವಣೆಯಲ್ಲ:
ಈ ಚುನಾವಣೆ ಒಂದು ರಾಷ್ಟ್ರೀಯ ಚುನಾವಣೆ, ಒಂದು ಕ್ಷೇತ್ರಕ್ಕೆ ಸೀಮಿತವಾದ ಚುನಾವಣೆಯಲ್ಲ. ಒಂದು ರಾಷ್ಟ್ರೀಯ ವಿಚಾರ ಮತ್ತು ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕೆಂಬ ನಿಟ್ಟಿನಲ್ಲಿ ಈ ಚುನಾವಣೆ ನಡೆಯಲಿದೆ. ವಿಶ್ವಕ್ಕೆ ನಾಯಕತ್ವ ಕೊಟ್ಟ ನರೇಂದ್ರ ಮೋದಿಯವರು ರಾಷ್ಟ್ರೀಯ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದಾರೆ. ಬಿಜೆಪಿಯು ಯಾವ ದಿಕ್ಕಿನಲ್ಲಿ ಹೋಗಬೇಕೋ ಆ ದಿಕ್ಕಿನಲ್ಲಿ ಸಾಗಿ ಕೆಲಸ ಕಾರ್ಯ ಮಾಡಿದ ಓರ್ವ ಸಮರ್ಥ ಪ್ರಧಾನಿ ನರೇಂದ್ರ ಮೋದಿ. ಅವರು ಮತ್ತೆ ಪ್ರಧಾನಿಯಾಗಬೇಕೆಂಬ ಹಿನ್ನಲೆಯಲ್ಲಿ ನಾವು ಯಾರೋ ಒಬ್ಬರನ್ನು ಪ್ರಧಾನಿ ಮಾಡುವುದೇ ಉದ್ದೇಶವಲ್ಲ. ನಮ್ಮ ವಿಚಾರವನ್ನು ಗಟ್ಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟೋ ವರ್ಷಗಳ ರಾಮಮಂದಿರ ಕನಸು, ರಾಷ್ಟ್ರೀಯ ವಿಚಾರ ಮತ್ತು ಭಾವನಾತ್ಮಕ ವಿಚಾರದ ಕುರಿತು ಪಕ್ಷ ಏನು ಯೋಚನೆ ಮಾಡಿತೋ ಅದನ್ನು ಸಾರ್ಥಕ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಆ ಕಾರಣಕ್ಕಾಗಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಸತೀಶ್ ಕುಂಪಲ ಹೇಳಿದರು.

ಪದಾಧಿಕಾರಿಯಿಲ್ಲದಿದ್ದರೂ ಬಿಜೆಪಿ ಕೆಲಸ ಕಾರ್ಯ ಮಾಡುತ್ತದೆ:
ಪುತ್ತೂರಿನಲ್ಲಿ ವಿಶೇಷವಾಗಿ ನಿರೀಕ್ಷೆ ಇರಬಹುದು. ನಮ್ಮಲ್ಲಿ ಅಧ್ಯಕ್ಷರ ಘೋಷಣೆ ಆಗಿಲ್ಲ. ಕ್ಷೇತ್ರಮಟ್ಟದ ತಂಡ ಘೋಷಣೆ ಆಗಿಲ್ಲ ಎಂಬ ನಿಮ್ಮ ಮನಸ್ಸಿನಲ್ಲಿ ಇರಬಹುದು. ಆದರೆ ರಾಜ್ಯದಲ್ಲಿ 10 ಕಡೆ ಜಿಲ್ಲಾಧ್ಯಕ್ಷರನ್ನೇ ಘೋಷಣೆ ಮಾಡಿ ಆಗಿಲ್ಲ. ಇದು ನಿಮೆಗೆಲ್ಲ ತಿಳಿದಿರಲಿ. ಈಗಿರುವ ತಂಡವೇ ಅಲ್ಲಿ ಕೆಲಸ ಮಾಡುತ್ತಿದೆ. ಪುತ್ತೂರಿನಲ್ಲೂ ಕೂಡಾ ಒಂದು ಸ್ವಲ್ಪ ಕಾಲ ಇದ್ದಂತಹ ತಂಡವೇ ಕೆಲಸ ಮಾಡಬೇಕೆಂದು ರಾಜ್ಯ ನಾಯಕರ ಅಪೇಕ್ಷೆಯಂತೆ ತಂಡವನ್ನು ಮುಂದುವರಿಸಿದ್ದಾರೆ ಹೊರತು ಬೇರೆ ಯಾವುದೇ ಕಾರಣಕ್ಕೂ ಹೊಸ ಸಮಿತಿ ಘೋಷಣೆ ಮಾಡದೆ ಇರುವುವಂತಹದ್ದಲ್ಲ. ಈ ಸಮಿತಿಯ ಅನುಭವ ಆಧಾರದ ಮೇಲೆ ಮುಂದೆ ಚುನಾವಣೆಯ ಕೆಲಸ ಕಾರ್ಯ ನಡೆಯಲಿದೆ. ಹಾಗಾಗಿ ಅಧ್ಯಕ್ಷರಿಗೆ ಮನಸ್ಸಿನಲ್ಲಿ ಆತಂಕ ಬೇಡ. ಪದಾಧಿಕಾರಿ ಇಲ್ಲದಿದ್ದರೂ ಬಿಜೆಪಿ ಕೆಲಸ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಾವು ಮಾಡುತ್ತೇವೆ ಎಂದು ಎಲ್ಲರು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಸತೀಶ್ ಕುಂಪಲ ಹೇಳಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದನ್ನು ಪುತ್ತೂರಿನಲ್ಲಿ ಕಾರ್ಯರೂಪದಲ್ಲಿ ಮಾಡಲಾಗುತ್ತಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಪುತ್ತೂರು ಉಸ್ತುವಾರಿಯಾಗಿರುವ ಪ್ರೇಮಾನಂದ್, ಜಿಲ್ಲೆಯ ಉಪಾಧ್ಯಕ್ಷರಾಗಿರುವ ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರುವಾರು, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್ ಪುತ್ತೂರು, ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ ನಾರಾಯಣ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಪುತ್ತೂರು ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಮುಳಿಯ ಪ್ರಾರ್ಥಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಉಸ್ತುವಾರಿ ಅಧ್ಯಕ್ಷರುಗಳು ಸಭೆಯಲ್ಲಿ ಪಾಲ್ಗೊಂಡರು.

ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ, ವ್ಯತ್ಯಾಸಗಳಿಲ್ಲ:
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವ್ಯತ್ಯಾಸವಿಲ್ಲ. ಚರ್ಚೆಗಳು ಸಾವಿರಾರು ಆಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಏನು ಚರ್ಚೆ ಆಗುತ್ತದೆ ಎಂಬುದು ನಮ್ಮ ಮನಸ್ಸಿನಲ್ಲಿ ಗೊತ್ತಿದೆ. ಅಂತಿಮವಾಗಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರು ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವೂ ಇದೆ. ಯಾವ ವಿಚಾರಕ್ಕಾಗಿ, ಸಿದ್ದಾಂತ, ಭಾವನೆಗಳಿಗಾಗಿ ಹೋರಾಟ ನಡೆಯುತ್ತದೆಯೋ ಅವೆಲ್ಲ ಅಂತಿಮವಾಗಿ ನರೇಂದ್ರ ಮೋದಿಯವರನ್ನು ಈ ದೇಶದ ಹಿತವನ್ನು ಕಾಯುವ ಹೋರಾಟ ಆಗಬೇಕು. ಜಿಲ್ಲೆಯಲ್ಲಿ ಸಣ್ಣ ಸಣ್ಣ ವ್ಯತ್ಯಾಸ ಸ್ವಾಭಾವಿಕ ಆದರೆ ಅಂತಿಮವಾಗಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸುತ್ತದೆ.
– ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು

LEAVE A REPLY

Please enter your comment!
Please enter your name here