ನಾನಿದ್ದನ್ನು ವೈಯುಕ್ತಿವಾಗಿ ತೆಗೆದು ಕೊಂಡಿದ್ದೇನೆ- ವಿಕಲಚೇತನರಿಗೆ ಸಲಕರಣೆ ವಿತರಿಸಿದ ಶಾಸಕ ಅಶೋಕ್ ರೈ
ಪುತ್ತೂರು: ವಿಕಚೇತನರ ನೋವು ಪೋಷಕರಿಗೆ ಮಾತ್ರ ತಿಳಿಯುತ್ತದೆ ಹೊರತು ಬೇರೆಯವರಿಗೆ ಗೊತ್ತಾಗುವುದಿಲ್ಲ. ಅವರ ನೋವಿಗೆ ಸ್ಪಂಧನೆ ಮಾಡುವುದು ನಮ್ಮ ಕರ್ತವ್ಯ. ನೆಲ್ಲಿಕಟ್ಟೆ ಶಾಲಾ ವಠಾರದಲ್ಲೇ ವಿಕಲಚೇತನರ ಪಿಸಿಯೋಥೆರಪಿ ಕೇಂದ್ರ ತೆರೆಯಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದ್ದಾರೆ.
ನೆಲ್ಲಿಕಟ್ಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಾ.5ರಂದು 34 ಮಂದಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೆಲ್ಲಿಕಟ್ಟೆ ವಿಕಲಚೇತನರಿಗೆ ಪಿಹೆಚ್‌ಸಿ ಮಾಡುವುದೆಂದು ತೀರ್ಮಾನ ಮಾಡಿದಾಗ ಇದಕ್ಕೆ ಈ ಭಾಗದ ಎಸ್‌ಡಿಎಂಸ್‌ಸಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿಕಲಚೇತರ ನೋವು ಯಾರಿಗೂ ಅರ್ಥ ಅಗುವುದಿಲ್ಲ. ಅವರಿಗೆ ಸ್ಪಂಧನೆ ಕೊಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಪಿಹಚ್‌ಸಿ ಸೆಂಟರ್ ತೆರೆಯುವ ಕುರಿತು ವೈಯುಕ್ತಿವಾಗಿ ತೆಗೆದು ಕೊಂಡಿದ್ದೇನೆ. ರೂ.13 ಲಕ್ಷದಲ್ಲಿ ಪಿಸಿಯೋಥೆರಪಿ ಸೆಂಟರ್ ಮತ್ತು ವೀಲ್ ಚೇಯರ್‌ನಲ್ಲೇ ಶೌಚಾಲಯಕ್ಕೆ ಹೋಗುವ ವ್ಯವಸ್ಥೆಯ ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗವುದು ಎಂದ ಅವರು ವಿಕಲಚೇತನ ಯಾವುದೇ ಅನುದಾನದಲ್ಲಿ ಯಾರೂ ವಿರೋಧ ಮಾತನಾಡುವ ಹಾಗಿಲ್ಲ ಎಂದ ಅವರು ಈ ಭಾಗದ ಎಸ್‌ಡಿಎಂಸಿ ಅವರು ಗೊತ್ತಿಲ್ಲದೆ ವಿರೋಧ ವ್ಯಕ್ತಪಡಿಸಿರಬಹುದು ಎಂದ ಅವರು ರಸ್ತೆ ಕಾಮಗಾರಿಗಳಾಗಿದ್ದರೂ ವಿಕಲಚೇತನರ ಬೇಡಿಕೆಗೆ ಮೊದಲ ಆದ್ಯತೆ ಎಂದರು.
ಶಾಲೆಗೆ ಆವರಣಗೋಡೆ ಬೇಡಿಕೆ:
ನಗರಸಭಾ ಸ್ಥಳೀಯ ಸದಸ್ಯ ರಮೇಶ್ ರೈ ಅವರು ಮಾತನಾಡಿ ಇಲ್ಲಿ ವಿಕಲಚೇತನರಿಗೆ ಪಿಸಿಯೋಥೆರಪಿ ಸೆಂಟರ್ ಮಾಡಲು ನಮ್ಮ ವಿರೋಧವಲ್ಲ. ಶಾಸರಕ ಕಾರ್ಯ ಮಹತ್ವದದ್ದು, ಇದರಲ್ಲಿ ಎರಡು ಮಾತಿಲ್ಲ. ಆದರೆ ಶಾಲೆಯ ಆವರಣ ಬಿಟ್ಟು ಹೊರಗೆ ಮಾಡಬೇಕೆಂಬುದು ನಮ್ಮ ಮನವಿ. ಶಾಲೆಗೆ ಆವರಣಗೋಡೆಯು ಇಲ್ಲ. ಮುಂದೆ ಇಲ್ಲಿ ಸಾಕಷ್ಟು ವಾಹನ ಬರುವಾಗ ಶಾಲಾ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಶಾಲೆಗೆ ಆವರಣಗೋಡೆಯನ್ನು ಮಾಡಿಸಿಕೊಡುವಂತೆ ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಮಾತನಾಡಿ ನಾವು ಐದಾರು ತಾಲೂಕಿನಲ್ಲಿ ಕೆಲಸ ಮಾಡಿ ಬಂದಿರುವುದು. ಆದರೆ ಅಲ್ಲಿ ನಾವು ಸರಕಾರದಿಂದ ಬಂದಿರುವುದನ್ನು ಮಾತ್ರ ಕೊಡುತ್ತಿದ್ದೆವು. ಈ ವರ್ಷ ಇಲ್ಲಿ ರೂ. 3.70 ಲಕ್ಷ ಅನುದಾನದಲ್ಲಿ ಸಾಧನ ಸಲಕರಣೆ ನೀಡುವುತ್ತಿರುವುದು ದೊಡ್ಡ ವಿಚಾರ ಎಂದರು. ವೇದಿಕೆಯಲ್ಲಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನ ನಿಹಾಲ್ ಶೆಟ್ಟಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಡಿ.ಟಿ.ಇ.ಆರ್ ತನುಜಾ, ಸೀತಮ್ಮ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದಾಮೋದರ್ ಭಂಡಾರ್‌ಕರ್, ಜಯಪ್ರಕಾಶ್ ಬದಿನಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.