ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ಶೇ.50, 90ರ ಸಹಾಯಧನ ಲಭ್ಯ

0

ಕೃಷಿ ಇಲಾಖೆಯಿಂದ ಶೇ.90 ಮತ್ತು ಶೇ 50ರ ಸಹಾಯಧನದಲ್ಲಿ ವಿವಿಧ ಬಗೆಯ ಯಂತ್ರೋಪಕರಣಗಳ (Agriculture machinaery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ರೈತರು ತಮಗೆ ಆವಶ್ಯವಿರುವ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದು.

ಸಬ್ಸಿಡಿ ವಿವರ:
ಎಲ್ಲಾ ವರ್ಗದ ರೈತರು SMAM ಯೋಜನೆಯಡಿ(Agriculture machoaery susbsidy yojana), ಪಡೆಯಲು ಈ ಕೆಳಗಿನ ಉಪಕರಣಗಳನ್ನು ಸಾಮಾನ್ಯ ರೈತರು ಶೇ.50ರ ಸಬ್ಸಿಡಿ ಪಡೆಯಬಹುದು. ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90 ರವರೆಗೆ (ಕೆಲವು ಮಿತಿಗೊಳಪಟ್ಟು )ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.
ಸಬ್ಸಿಡಿಯಲ್ಲಿ ದೊರೆಯುವ ಯಂತ್ರೋಪಕರಣಗಳು:
1) ಕಳೆ ಕತ್ತರಿಸುವ ಯಂತ್ರ
2) ರೋಟರಿ/ಪವರ್ವೀಡರ್
3) ಯಂತ್ರಚಾಲಿತ ಕೈಗಾಡಿಗಳು (load cart) 350 KG ವರೆಗೆ
4) ಔಷದಿ ಸಿಂಪಡಣೆಗೆ HTP spryayers
5) ಪವರ್ಟಿಲ್ಲರ್

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು:
ಅರ್ಜಿದಾರರ ಪೋಟೋ .
ಆಧಾರ್ ಕಾರ್ಡ್‌ಪ್ರತಿ.
ಹಿಡುವಳಿ ಪ್ರಮಾಣ ಪತ್ರ .(RTC)
ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡದ ರೈತರಿಗೆ ಮಾತ್ರ ).
ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ

ಹೆಚ್ಚಿನ ಮಾಹಿತಿಗಾಗಿ ಎಪಿಎಂಸಿ ರಸ್ತೆಯಲ್ಲಿರುವ ಸಾಯ ಎಂಟರ್ ಪ್ರೈಸಸ್‌ನ ಪ್ರತಿ ನಿಧಿ ಅಥವಾ ಮೊಬೈಲ್ 9448765852, 7338401852 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here