ಈಶ್ವರಮಂಗಲ: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯು ಮಾ.6 ರಿಂದ ಮಾ.13 ರರವರೆಗೆ ಮತ್ತು ಮಾ.14ರಂದು ಕಿನ್ನಿಮಾಣಿ,ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದ್ದು ಇದರ ಹಸಿರುವಾಣಿ ಹೊರೆಕಾಣಿಕೆಯು ನೂಜಿಬೈಲು, ಪೆರ್ನಾಜೆ, ಸಾಂತ್ಯ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ಯಾಳ, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತ್ತಡ್ಕ,ಮತ್ತು ಎಲ್ಲಾ ಸಂಸ್ಥೆಯವರು ಈಶ್ವರಮಂಗಲ ಪಂಚಾಯತ್ ಬಳಿ ಸೇರಿ ಮಕ್ಕಳ ಕುಣಿತ ಭಜನೆ ಜೊತೆ ಮೆರವಣಿಗೆಯೋದಿಗೆ ಹಸಿರುವಾಣಿ ಹೊರೆ ಕಾಣಿಕೆ ನಡೆಯಿತು. ಬಳಿಕ ಉಗ್ರಾಣ ತುಂಬುವುದು ಮತ್ತು ದುರ್ಗಾ ಪೂಜೆ ನಡೆಯಿತು.
ಮೆರವಣಿಗೆಯನ್ನು ಪೆರ್ನಾಜೆ ಗೋಪಾಲಕೃಷ್ಣ ಕಲ್ಲೂರಾಯ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪವಿತ್ರ ಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾತ್ಯ, ಉತ್ಸವ ಸಮಿತಿ, ಬೈಲುವಾರು ಸಮಿತಿಯ ಪದಾಧಿಕಾರಿಗಳು, ಸರ್ವಸದಸ್ಯರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು