ಪುತ್ತೂರು: ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುದೀರ್ಘ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಾಂತಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಗುರು ಸವಿತಾ ಕುಮಾರಿ ಎಮ್.ಡಿ ಇವರ ವಿದಾಯ ಕೂಟ ಹಾಗೂ ಅಭಿನಂದನಾ ಸಮಾರಂಭ ಮಾ.2 ರಂದು ಶಾಂತಿಗೋಡು ಸರಕಾರಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೀಶ್ ಪಿ ನಾಯ್ಕ್ ರವರು, ನಿವೃತ್ತರಾದ ಮುಖ್ಯಗುರು ಸವಿತ ಕುಮಾರಿ ಶಾಲೆಯ ಅಭಿವೃದ್ಧಿಗೆ ಬಹಳಷ್ಟು ದುಡಿದಿದ್ದಾರೆ ಮಾತ್ರವಲ್ಲ ಎಲ್ಲರ ಪ್ರೀತಿಯನ್ನು ಸಂಪಾದಿಸಿದ್ದಾರೆ.ಸರಕಾರಿ ವೃತ್ತಿಯಲ್ಲಿ ನಿವೃತ್ತಿ ಎಂಬುದು ಇದ್ದೇ ಇದೆ. ಈ ನಿಟ್ಟಿನಲ್ಲಿ ಸೇವೆಯಿಂದ ನಿವೃತ್ತ ಶಿಕ್ಷಕಿ ಸವಿತ ಕುಮಾರಿರವರ ಮುಂದಿನ ನಿವೃತ್ತ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ , ಇ.ಸಿ.ಒಗಳಾದ ಅಮೃತ ಕಲಾ, ಹರಿಪ್ರಸಾದ್, ನರಿಮೊಗರು ಕ್ಲಸ್ಟರ್ ಸಿ.ಆರ್.ಪಿ ಪರಮೇಶ್ವರಿ, ಪುತ್ತೂರು ನಗರ ಸು.ಆರ್.ಪಿ ಶಶಿಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ , ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ನಾಗಮ್ಮ ಬಾಲಕೃಷ್ಣ ತೋಟ, ಆಶಾ ಸಚಿಂದ್ರ ಬೊಳ್ಳೆಕ್ಕು, ಎಸ್ ಡಿ ಎಮ್ ಸಿ ಸದಸ್ಯರು, ಪೋಷಕ ವೃಂದ, ಊರ ಗಣ್ಯರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕರನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮೆರವಣಿಗೆಯಲ್ಲಿ ಸ್ವಾಗತಿಸಿದರು.ಆ ಬಳಿಕ ಶಾಲಾ ಶಿಕ್ಷಣ ಇಲಾಖೆ ಪುತ್ತೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಎಸ್.ಡಿ.ಎಂ.ಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ಗಣ್ಯರು, ಅಕ್ಷರದಾಸೋಹ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರ ವತಿಯಿಂದ ನಿವೃತ್ತ ಶಿಕ್ಷಕಿ ಸವಿತ ಕುಮಾರಿರವರನ್ನು ಸನ್ಮಾನಿಸಲಾಯಿತು.
ಗಣ್ಯರು, ಅಧಿಕಾರಿಗಳು ನಿವೃತ್ತ ಶಿಕ್ಷಕರ ಸಾಧನೆಗಳನ್ನು ಸ್ಮರಿಸಿ ಶುಭ ಹಾರೈಸಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್, ನರಿಮೊಗರು ಕ್ಲಸ್ಟರ್ ನ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು , ನಿವೃತ್ತರ ಆತ್ಮೀಯರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಿಗೆ ಗುರುವಂದನೆ ಸಲ್ಲಿಸಿದರು ಆ ಬಳಿಕ ನಿವೃತ್ತ ಶಿಕ್ಷಕರು ತಮ್ಮ 31 ವರ್ಷಗಳ ಸುಧೀರ್ಘ ಸೇವಾ ಅವಧಿಯಲ್ಲಿ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಸರ್ವರಿಗೂ ಗೌರವಿಸಿ ಕೃತಜ್ಞತಾ ಸ್ಮರಣೆ ಮಾಡಿದರು. ಎಸ್ ಡಿ ಎಂ .ಸಿ ಉಪಾಧ್ಯಕ್ಷರಾದ ನಾಗೇಶ್ ಎಸ್. ನಿವೃತ ಶಿಕ್ಷಕರ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿ ಕೃತಜ್ಞತೆ ಅರ್ಪಿಸಿದರು.
ಶಾಲಾ ಮಕ್ಕಳು ಪ್ರಾರ್ಥಿಸಿ , ಪ್ರಭಾರ ಮುಖ್ಯ ಶಿಕ್ಷಕ ದೇವಪ್ಪ ಸ್ವಾಗತಿಸಿದರು. ಜಿಪಿಟಿ ಶಿಕ್ಷಕ ಸುನಿಲ್ ಎಂ ಆರ್ ವಂದಿಸಿದರು. ಶಿಕ್ಷಕಿಯರಾದ ಕೃಷ್ಣವೇಣಿ ಮತ್ತು ಲೀಲಾವತಿ ರವರು ಕಾರ್ಯಕ್ರಮ ನಿರೂಪಿಸಿದರು.