ಮಾ.7-8: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ 31ನೇ ವಾರ್ಷಿಕೋತ್ಸವ – ಶ್ರೀ ದೈವಗಳ ನೇಮೋತ್ಸವ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಇದರ 31ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ:
ಮಾ.7ರಂದು ರಾತ್ರಿ ಪುರುಷರಕಟ್ಟೆ ಶ್ರೀದುರ್ಗಾ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ, ಸೇರಾಜೆ ಶ್ರೀ ಶಾರದಾಂಬ ಭಜನಾ ಮಂಡಳಿ, ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಮಾ.8ರಂದು ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ಸಾಯಂಕಾಲ ನಂದಿಕೇಶ್ವರ ಭಜನಾ ಮಂದಿರದ ಮಕ್ಕಳಿಂದ ಕುಣಿತ ಭಜನೆ, ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ರಾತ್ರಿ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಶ್ರೀ ಕ್ಷೇತ್ರದ ಅಧ್ಯಕ್ಷ ದಿ.ಶ್ರೀಪಾಲ್ ಜೈನ್‌ರವರ ಸ್ಮರಣಾರ್ಥ ಅಗಲಿದ ಶ್ರೀಪಾಲ್ ಜೈನ್‌ರವರ ಮನೆಯವರಿಂದ ಅನ್ನಸಂತರ್ಪಣೆ ನಡೆಯಲಿದೆ.

ಸಭಾ ಕಾರ್ಯಕ್ರಮ:
ರಾತ್ರಿ ಶ್ರೀ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈಯವರು ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿ ಉಪ್ಪಳರವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಅಧ್ಯಕ್ಷ ವರುಣ್ ಕುಮಾರ್ ಜೈನ್‌ರವರು ವಹಿಸಲಿದ್ದಾರೆ. ಧಾರ್ಮಿಕ ಪ್ರವಚನವನ್ನು ಸುಜಯ್ ತಂತ್ರಿ ಉಪ್ಪಳರವರು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭೆ ಸದಸ್ಯೆ ಶ್ರೀಮತಿ ರೋಹಿಣಿ ಕೇಶವ ಪೂಜಾರಿ, ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ದ.ಕ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್‌ರವರು ಭಾಗವಹಿಸಲಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here