ಪುತ್ತೂರು: ಬದ್ರಿಯಾ ಜುಮಾ ಮಸೀದಿ ಪರ್ಪುಂಜ ಇದರ 2023-24ನೇ ಅವಧಿಯ ಪದಾಧಿಕಾರಿಗಳನ್ನು ಮುಂದಿನ 2024-25ನೇ ಸಾಲಿನ ಪದಾಧಿಕಾರಿಗಳಾಗಿ ಮುಂದುವರಿಸಲಾಗಿದ್ದು, ಅಧ್ಯಕ್ಷರಾಗಿ ನವಾಝ್ ಸುಪ್ರಿಂ, ಉಪಾಧ್ಯಕ್ಷರಾಗಿ ಶರೀಫ್ ಪಿ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎಂ, ಹಾಗೂ ಜೊತೆ ಕಾರ್ಯದರ್ಶಿಯಾಗಿ ನಝೀರ್ ಪಿ ಪುನರಾಯ್ಕೆಗೊಂಡರು. ಪರ್ಪುಂಜ ಮಸೀದಿಯ ಖತೀಬ್ ಅಶ್ರಫ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿ ಹಂಝ ಎಂ ಲೆಕ್ಕ ಪತ್ರ ಮಂಡಿಸಿದರು.
ಸಮಿತಿ ಸದಸ್ಯರುಗಳಾಗಿ ಮಹಮ್ಮದ್ ಹಾಜಿ ಜೆಜೆಬಿ, ಶರೀಫ್ ಹಾಜಿ, ಹನೀಫ್ ಭಾರತ್, ರಶೀದ್ ಕೆ, ಸಿದ್ದೀಕ್ ಸೌದಿ, ನೆಲ್ಯಾಡಿ ಅಬೂಬಕ್ಕರ್, ಹಸೈನಾರ್ ಡಿಂಬ್ರಿ, ಅಶ್ರಫ್ ಪಿ.ಬಿ, ಅಬ್ದುಲ್ ರಹಿಮಾನ್, ಮೂಸಾ ಪಿ.ಎಂ ಆಯ್ಕೆಯಾಗಿದ್ದಾರೆ.