ಅಯೋಧ್ಯೆ ಅಷ್ಟಾವಧಾನದಲ್ಲಿ ಕೃಷ್ಣವೇಣಿ ಪ್ರಸಾದ್ ಮುಳಿಯರಿಂದ ಸಂಗೀತ ಸೇವೆ

0

ಪುತ್ತೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿ. ತೀರ್ಥ ಕ್ಷೇತ್ರ ಉಡುಪಿ ಪೇಜಾವರ ಮಠಾದೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಟ್ರಸ್ಟ್ ವತಿಯಿಂದ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲ ಉತ್ಸವದ ಅಷ್ಟಾವಧಾನದಲ್ಲಿ ಮಾರ್ಚ್ 5 ರಂದು ಪುತ್ತೂರಿನ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಮೋಹನ ರಾಗದ ‘ರಾಮ ನಿನ್ನು ನಮ್ಮಿನ ತ್ಯಾಗರಾಜ’ ಕೃತಿಯನ್ನು ಹಾಡುವುದರ ಮೂಲಕ ಸಂಗೀತ ಸೇವೆಯನ್ನು ಸಮರ್ಪಿಸಿದರು. ಮೃದಂಗ ಮತ್ತು ವಯಲಿನ್ ನಲ್ಲಿ ಬೆಂಗಳೂರಿನ ಕಲಾವಿದರು ಸಹಕರಿಸಿದರು. ಅಯೋಧ್ಯೆಯಲ್ಲಿ ಶ್ರೀಬಾಲರಾಮನಿಗೆ ಪಲ್ಲಕ್ಕಿ ಉತ್ಸವ, ಚಾಮರ ಸೇವೆ, ಕೊಡೆಸೇವೆ, ಹೋಮ, ಪೂಜೆ, ಆರತಿ ಸೇವೆ, ಕೆಲಶ ಸೇವೆಗಳು ನಿರಂತರ ನಡೆಯುತ್ತಿದೆ ಎಂದು ಕೃಷ್ಣವೇಣಿಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here