ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಇಂದ್ರಪ್ರಸ್ಥ ಯಕ್ಷಗಾನ ಬಯಲಾಟ – ‘ಯಕ್ಷಮಿತ್ರರು’ ವೆಬ್ ಸೈಟ್ ಬಿಡುಗಡೆ ಮಾಡಿದ ಎಡನೀರು ಶ್ರೀಗಳು

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ‘ಇಂದ್ರಪ್ರಸ್ಥ’ ಎಂಬ ಯಕ್ಷಗಾನ ಬಯಲಾಟ ಮಾ.7 ರಂದು ರಾತ್ರಿ ನಡೆಯಿತು. ಇದೆ ಸಂದರ್ಭದಲ್ಲಿ ಯಕ್ಷಮಿತ್ರರು ಎಂಬ ವೆಬ್ ಸೈಟ್ ಉದ್ಘಾಟನೆಗೊಂಡಿತು.

ಎಡನೀರು ಶ್ರೀ ಸಚ್ಚಿದಾನಂದ ಭಾರತಿಯವರು ನೂತನ ಯಕ್ಷಮಿತ್ರರು ಎಂಬ ವೆಬ್ ಸೈಟ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರಾವಳಿ ಭಾಗದ ಯಕ್ಷಗಾನ ಕಲೆ ಎಲ್ಲಾ ಕಡೆ ಪ್ರಶಂಸೆಗೊಳಪಟ್ಟಿದೆ. ಪುರಣಾ, ಇತಿಹಾಸವನ್ನು ಈಗಿನ ಪೀಳಿಗೆಗೆ ಇಳಿಸುವ ಕೆಲಸ ಯಕ್ಷಗಾನದ ಮೂಲಕ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ಯಾಮ ಸೂರ್ಯ ಮುಳಿಗದ್ದೆ ಅವರ ನೇತೃತ್ವದಲ್ಲಿ ಯುವಕರ ತಂಡ ಅಂತರ್‌ಜಾಲದ ಮೂಲಕ ಕೂಟ ಕಟ್ಟಿಕೊಂಡು ಯಕ್ಷಗಾನ ಕಲೆಗೆ ಮತ್ತಷ್ಟು ಪುಷ್ಟಿ ನೀಡುವುದು ಉತ್ತಮ ವಿಚಾರ. ಅವರ ಸಾಧನೆ ಯುವ ಜನತೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪುರಾಣದ ವಿಚಾರವನ್ನು ಮೈಗೂಡಿಸುವಂತಾಗಲಿ ಎಂದು ಹಾರೈಸಿದರು.

ಹನುಮಗಿರಿ ಕ್ಷೇತ್ರದ ಧರ್ಮದರ್ಶಿಯಾಗಿರುವ ನನ್ಯ ಅಚ್ಚುತ ಮೂಡೆತ್ತಾಯ, ಯಕ್ಷಮಿತ್ರರು ಬೆಂಗಳೂರು ಇದರ ಅಧ್ಯಕ್ಷ ವೆಂಕಟೇಶ್ ರಾವ್, ಕಿರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಯಕ್ಷಗಾನ ಬಯಲಾಟ ಮುಂದುವರಿಯಿತು. ಶ್ರೀಗಳು ಆರಂಭದಲ್ಲಿ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಸದಸ್ಯರು, ಜಾತ್ರೋತ್ಸವ ಸಮತಿಯ ರಾಜಶೇಖರ್ ಜೈನ್ ನೀರ್ಪಾಜೆ, ರಾಘವೇಂದ್ರ ಮಯ್ಯ, ಮಾಜಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಅರ್ಚಕ ಶಿವಪ್ರಸಾದ್ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಯಕ್ಷಗಾನ ಬಯಲಾಟದ ಮೂಲಕ ಸಹಾಯ ಹಸ್ತ
2019ರಲ್ಲಿ ವಾಟ್ಸಪ್ ಮೂಲಕ ಬೆಂಗಳೂರಿನ ಸ್ನೇಹಿತರು ಸೇರಿಕೊಂಡು ಯಕ್ಷಮಿತ್ರರು ಎಂಬ ಕೂಟ ರಚಿಸಿದ್ದೆವು. ಪ್ರತಿ ವರ್ಷ ಯಕ್ಷಗಾನ ಕಾರ್ಯಕ್ರಮ ಹಾಕಿಕೊಂಡು ಅದರ ಮೂಲಕ ಧನ ಸಹಾಯ ಮಾಡುವ ಯೋಜನೆ ರೂಪಿಸಿದ್ದೆವು. ಇದೀಗ ನಮ್ಮ ಸ್ನೇಹಿತ ಬಳಗ ಯಕ್ಷಗಾನದಲ್ಲಿ ಇನ್ನಷ್ಟು ಸೇವೆ ನೀಡುವ ಉದ್ದೇಶದಿಂದ ಬೆಂಗಳೂರು ಯಕ್ಷಮಿತ್ರರು ಎಂಬ ಸಂಘಟನೆಯನ್ನು ನೋಂದಾವಣೆ ಮಾಡಿಕೊಂಡು ಹೊಸದಾಗಿ ವೆಬ್‌ಸೈಟ್ ಆರಂಭಿಸಿದ್ದೇವೆ.
-ಶ್ಯಾಮಸೂರ್ಯ ಮುಳಿಗದ್ದೆ

LEAVE A REPLY

Please enter your comment!
Please enter your name here