ಜೆಇಇ ಮೈನ್ಸ್2 ಪ್ರವೇಶ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ:

0

ಉಪ್ಪಿನಂಗಡಿ: 2023-24ರ ಜೆಇಇ ಪ್ರವೇಶ ಪರೀಕ್ಷೆಯ ಬಿ ಪ್ಲಾನಿಂಗ್ ವಿಭಾಗದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪಿ ಸಿಂಚನ್ ರಾವ್ – 99.64, ಮಹಮ್ಮದ್ ಮುಝಾಮಿಲ್ – 99.24, ಸುಶ್ರಾವ್ಯ – 95.4, ಧನ್ ರಾಜ್ ನಾಯ್ಕಎಮ್ – 90.29, ಶಿಶಿರ್ ಎಸ್ ದೇವಾಡಿಗ – 89.8, ಶ್ರದ್ಧಾ ಭಟ್ –85.3, ಪೂಜಾ ಕೆ ಆರ್ – 85.3 ಪರ್ಸಂಟೈಲ್‌ ಗಳಿಸಿದ್ದಾರೆ. ಆರ್ಕಿಟೆಕ್ಚರ್ ವಿಭಾಗದಲ್ಲಿ ಸಾಯಿರಾಮ್ ಪರಶುರಾಮಲದ್ವ – 91.9, ಸಾತ್ವಿಕ್ ಕೆ ಆರ್ – 88.26, ಕೆ ಎ ಫಾತಿಮತ್ ಹರ್ಷಿದಾ – 86.8, ಅನುಷಾ ಜಿ ಎಸ್ – 85.5 ಪರ್ಸಂಟೈಲ್‌ ಗಳಿಸಿರುತ್ತಾರೆ.
ಈ ಫಲಿತಾಂಶವು ಅತ್ಯಂತ ಉತ್ತಮವಾಗಿದ್ದು, ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ಹಿರಿಮೆಯಾಗಿದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ ಇ ಇ ಅರ್ಹತೆಯನ್ನು ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್. ಕೆ.ಪ್ರಕಾಶ್‌ರವರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here