





ಪುತ್ತೂರು: ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಾ.9 ಹಾಗೂ 10ರಂದು ರಾತ್ರಿ 8 ಗಂಟೆಗೆ ಹರಕೆ ನೇಮೋತ್ಸವ ಜರಗಲಿರುವುದು.


ಮಾ.9ರಂದು ಭಕ್ತರೋರ್ವರ ಸೇವಾರ್ಥವಾಗಿ ಹಾಗೂ ಮಾ.10ರಂದು ಪ್ರಕಾಶ್, ನಯನಾ ಕುಮಾರಿ, ವಂಶಿಕಾ, ದಿವಾಕರ್, ವಾರಿಜಾ ಬಲ್ನಾಡು ಇವರ ಸೇವಾರ್ಥವಾಗಿ ಹರಕೆ ನೇಮೋತ್ಸವ ಜರಗಲಿದ್ದು ಬಳಿಕ ಅನ್ನಸಂತರ್ಪಣೆ ಜರಗಲಿದೆ.





ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಕರಿಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








