ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿ ಐಸಿಎಸ್‌ಆರ್ ನ ಪ್ರಾಯೋಜಕ್ವತ ಮತ್ತು ಆರ್‌ಎಸ್‌ವಿಪಿ ಇದರ ಸಹಯೋಗದೊಂದಿಗೆ ಭಾರತ್ @ 2047 – ಶತಮಾನದ ದೃಷ್ಟಿ ಎಂಬ ವಿಷಯದಲ್ಲಿ ಎರಡು ದಿನಗಳ ವಿಚಾರಗೋಷ್ಠಿ ಕಾಲೇಜಿನ ಗೋಲ್ಡನ್ ಜ್ಯುಬ್ಲಿ ಹಾಲ್‌ನಲ್ಲಿ ನಡೆಯಲಿದೆ ಎಂದು ವಿಚಾರಗೋಷ್ಠಿಯ ಸಂಯೋಜಕಿಯಾಗಿರುವ ವಿವೇಕಾನಂದ ಸ್ನಾತಕೋತರ ಪತ್ರಿಕೋದ್ಯಮ ವಿಭಾಗದ ಡೀನ್ ವಿಜಯಸರಸ್ವತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಪಡೆದ ಬಳಿಕ ಶೈಕ್ಷಣಿಕ ಕಾರ್ಯ ಚಟುವಟಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಥಮವಾಗಿ ರಾಷ್ಟ್ರೀಯ ವಿಚಾರ ಸಂಕೀರ್ಣ ನಡೆಯುತ್ತಿದ್ದು, ಶಿಕ್ಷಣ ಸಂಸ್ಥೆ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕೂಡ ಶೈಕ್ಷಣಿಕವಾಗಿ ಸ್ಪಂದಿಸಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜ್ಞಾನ ಅನುಭವವನ್ನು ರಚನಾತ್ಮಕವಾಗಿ ರಾಜ್ಯ ದೇಶದ ಆಡಳಿತ ವ್ಯವಸ್ಥೆಗೆ ಕೊಡುವ ನಿಟ್ಟನಲ್ಲಿ ವಿಚಾರಗೋಷ್ಠಿ ಅತ್ಯಂತ ಮಹತ್ವಪೂರ್ಣವಾಗಿದೆ ಎಂದ ಅವರು ಗದಗದ ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ದಿ ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ. ವಿಷ್ಣುಕಾಂತ್ ಚಟ್ಟಳ್ಳಿ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಒರಿಸ್ಸ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎ.ಕೃಷ್ಣಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು ಕರ್ನಾಟಕ ಅಲ್ಲದೆ ಹೊರ ರಾಜ್ಯ ಸೇರಿ ಒಟ್ಟು ಸುಮಾರು 200 ಮಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾ.11ರಂದು ನಡೆಯುವ ವಿಚಾರ ಸಂಕಿರಣದ ಮೊದಲ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಸತೀಶ್ ಮರಾಠೆ ದೇಶದ ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಮಾಧವ ಭಟ್ ಮತ್ತು ದೆಹಲಿಯ ಜೆ ಎನ್ ಯು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ ರಮೇಶ್ ಸಾಲ್ಯಾನ್ ವಿಚಾರ ಮಂಡಿಸಲಿದ್ದಾರೆ. ಮಾ.12ರಂದು ಸಹಕಾರ ಕ್ಷೇತ್ರದ ಕುರಿತಾಗಿ ಚಾಣಕ್ಯ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ. ಯಶವಂತ್ ಡೋಂಗ್ರೆ ವಿಚಾರ ಮಂಡಿಸಲಿದ್ದಾರೆ. ಮೈಸೂರು ಎಸ್‌ಡಿಯಂಐಎಂಡಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ವೆಂಕಟ್ರಾಜ್ ವಿಚಾರಗೋಷ್ಠಿ ನಡೆಸಿಕೊಡಲಿದ್ದಾರೆ. ಎರಡು ದಿನದದಲ್ಲಿ ನಡೆಯುವ ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ವಿಜ್ಞಾನ ಮುಂತಾದ ವಿಷಯಗಳಲ್ಲಿ ವಿವಿಧ ಪರಿಣಿತರಿಂದ ಪ್ರಬಂಧವನ್ನು ಆರ್‌ಎಸ್‌ವಿಪಿಗೆ ಮಂಡನೆ ಮಾಡಲಾಗುವುದು ಎಂದು ವಿಜಯಸರಸ್ವತಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿವೇಕಾನಂದ ಸ್ವಾಯತ್ತ ಇದರ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಲಕ್ಷ್ಮೀ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ಶ್ರೀಪ್ರಿಯ ಉಪಸ್ಥಿತರಿದ್ದರು.