ಪುತ್ತೂರು: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಪುತ್ತೂರಿನ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ನ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ನ ಶಿಷ್ಯೆ ಅಧಿತಿ ಎಂ.ಎಸ್ ರವರಿಂದ ಅಷ್ಟಾವಧಾನ ಸೇವಾ ನೃತ್ಯ ಮಾ.9 ರಂದು ಪ್ರದರ್ಶನ ಗೊಂಡಿತು.
ಇವರು ಚಿತ್ರಕಲೆ, ಸ್ಪೀಡ್ ಆರ್ಟ್, ನೃತ್ಯ, ಭರತನಾಟ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ, ಬೆಂಗಳೂರಿನಲ್ಲಿ ನಡೆದ ಚಿತ್ರ ಸಂತೆ , ಉಡುಪಿ ವಿಶ್ವ ತುಳು ಸಮ್ಮೇಳನ, ವಿವಿಧ ಮೇಳ, ಸಮ್ಮೇಳನ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮ ಚಿತ್ರ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡುತ್ತಾರೆ. ದೇಶ-ವಿದೇಶದಿಂದ ತಮ್ಮ ಚಿತ್ರಕಲಾ ಪ್ರಿಯರು ಇವರ ಚಿತ್ರ ಕಲಾಕೃತಿಗಳನ್ನು ಖರೀದಿಸುತ್ತಾರೆ. ಇವರು ಝೆಂಟ್ ಆ್ಯಂಗಲ್ ಚಿತ್ರಕಲೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಜರ್ಮನಿ, ಯು.ಎಸ್.ಎ., ಆಫ್ರಿಕಾ, ಇಂಗ್ಲೆಂಡ್ ಹಾಗೂ ಇನ್ನಿತರ ದೇಶಗಳ ವಿದ್ಯಾರ್ಥಿಗಳಿಗೆ ಒನ್ ಲೈನ್ ತರಗತಿಯ ಮೂಲಕ ಚಿತ್ರಕಲೆಯ ಶಿಕ್ಷಣ ನೀಡುತ್ತಿರುವ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆ ಶಿವಾಜಿನಗರದ ನಿವಾಸಿಯಾದ ಇವರು ಪುತ್ತೂರಿನ ತೆಂಕಿಲದಲ್ಲಿ ನೆಲೆಸಿದ್ದಾರೆ. ಸುಳ್ಯ ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಮತ್ತು ಪೂರ್ಣಿಮಾ ದಂಪತಿಯ ಪ್ರಥಮ ಪುತ್ರಿಯಾಗಿದ್ದು ತಂಗಿ ಅನನ್ಯ ಜೊತೆ ಸು:ಖಿ ಜೀವನ ನಡೆಸುತ್ತಿದ್ದಾರೆ. ತಮ್ಮ 22ನೇ ವಯಸ್ಸಿನಲ್ಲಿ ಈ ಸಾಧನೆಗೆ ಅನೇಕ ಪ್ರಶಸ್ತಿ ,ಪುರಸ್ಕಾರ, ಗೌರವಗಳು ದೊರೆತಿದೆ. ಅಧಿತಿ ಎಂ.ಎಸ್ ಮೂಡುಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ದ್ವಿತೀಯ ವರ್ಷದ ಮನಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾರೆ.