ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

0

ಕಡಬ: ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.8ರಂದು ಮಹಾಶಿವರಾತ್ರಿ ಉತ್ಸವ ನಡೆಯಿತು.

ಬೆಳಿಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಏಕಾದಶ ರುದ್ರಾಭಿಷೇಕ, ಭಜನಾ ಸೇವೆ, ರಾತ್ರಿ ರಂಗಪೂಜೆ ನಡೆಯಿತು. ಇದೇ ವೇಳೆ ವಿದುಷಿ ಮಾನಸ ಪುನಿತ್ ರೈ ನಿರ್ದೇನದ ಕಡಬ ವಿಶ್ವ ಮೋಹನ ನೃತ್ಯ ಕಲಾ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು. ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಳ್ವ, ಉತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here