ಇಡ್ಕಿದು ಗ್ರಾಮದಲ್ಲಿ ಒಂದು ಕೋಟಿ ರೂಪಾಯಿ ಅನುದಾನದ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

0

ಅನುದಾನ ಬರುತ್ತದೆ ಎಂದು ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವವ ನಾನಲ್ಲ, ಅನುದಾನ ತಂದು ಚಪ್ಪಾಳೆ ಗಿಟ್ಟಿಸಿಕೊಳ್ಳುವವ ನಾನು-ಅಶೋಕ್ ಕುಮಾರ್ ರೈ

ವಿಟ್ಲ: ಇದೀಗಾಗಲೇ ಇಡ್ಕಿದು ಗ್ರಾಮದ ವಿವಿಧ ಕಡೆಗಳ ಅಭಿವೃದ್ದಿ ಕೆಲಸಗಳಿಗಾಗಿ ಒಂದು ಕೋಟಿ ರೂಪಾಯಿಯ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನಷ್ಟು ಶಿಲಾನ್ಯಾಸಗಳು ಮುಂದಿನ ದಿನಗಳಲ್ಲಿ ಗ್ರಾಮದೆಲ್ಲೆಡೆ ನಡೆಯಲಿದೆ. ರಸ್ತೆ ಕಾಮಗಾರಿಗೆ ಇನ್ನಷ್ಟು ಅನುದಾನಗಳು ಬರಲಿದೆ. ನಾವು ಅಭಿವೃದ್ಧಿಯತ್ತ ಗಮನ ಹರಿಸಬೇಕು. ಅಭಿವೃದ್ದಿಯ ವಿಚಾರದಲ್ಲಿ ನಾವೆಲ್ಲರೂ ಒಂದೇ. ಕಾರ್ಯಕರ್ತರೆಲ್ಲರಿಂದ ಪಕ್ಷ ಭೇದ ಮರೆತು ಸರಕಾರದ ಐದು ಗ್ಯಾರೆಂಟಿಗಳು ಮನೆ ಮನೆಗಳಿಗೆ ತಲುಪಿಸುವ ಕೆಲಸವಾಗಿದೆ. ಅನುದಾನ ಬರುತ್ತದೆ ಎಂದು ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವವ ನಾನಲ್ಲ. ಅನುದಾನ ತಂದು ಚಪ್ಪಾಳೆ ಗಿಟ್ಟಿಸಿಕೊಳ್ಳುವವ ನಾನು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಹೇಳಿದರು.

ಅವರು ಇಡ್ಕಿದು ಗ್ರಾಮ ವ್ಯಾಪ್ತಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದ ವಿವಿಧ ಕಾಮಗಾರಿಗಳಿಗೆ ಅಳಕೆಮಜಲುವಿನಲ್ಲಿ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು. ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯವಿರಬಾರದು. ಜನರ ಪ್ರೀತಿ, ವಿಶ್ವಾಸ ಗಳಿಸಿ. ಪಕ್ಷ ಭೇದ ಮರೆತು ಸಹಾಯ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯೋಣ. ಪಕ್ಷಾತೀತವಾಗಿ ಅನುದಾನಗಳನ್ನು ನೀಡೋಣ. ಹಂತಹಂತವಾಗಿ ಅನುದಾನವನ್ನು ತಂದು ಎಲ್ಲಾ ಕಡೆ ಅಭಿವೃದ್ಧಿಗೊಳಿಸೋಣ. ನಾನೇನು ನನ್ನ ರೈ ಎಸ್ಟೇಟ್ ನಿಂದ ಹಣ ತಂದು ಅನುದಾನಬಿಡುಗಡೆ ಮಾಡುತ್ತಿಲ್ಲ. ಜನರ ತೆರಿಗೆಹಣವನ್ನು ಅನುದಾನದ ರೂಪದಲ್ಲಿ ತರುತ್ತಿದ್ದೇನೆ‌. ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಂದ ವಿಚಾರದಲ್ಲಿ ಹಲವರಿಗೆ ಸಂಶಯವಿದೆ. ನೀವುಗಳು ನಿಶ್ಪಕ್ಷಪಾತವಾಗಿ ದಾಖಲೆ ತೆಗೆದು ನೋಡಬಹುದು ಎಂದರು.

ಇಡ್ಕಿದು ಉಸ್ತುವಾರಿಗಳಾದ ಪ್ರಸಾದ್ ಕೌಶಲ್ ಶೆಟ್ಟಿ, ಅಶ್ರಫ್ ಬಸ್ತಿಕ್ಕಾರ್, ಅಬ್ದುಲ್ ರಹಿಮಾನ್ ಯುನಿಕ್, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವಾ, ನಝೀರ್ ಮಠ, ಕೃಷ್ಣ ರಾವ್ ಅರ್ತಿಲ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅಳಕೆ ಮಜಲು, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯ, ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಪ್ರಮುಖರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸೋಮಶೇಖರ ಶೆಟ್ಟಿ ಅಳಕೆಮಜಲು, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಮಿತ್ತೂರು, ಬೂತ್ ಅಧ್ಯಕ್ಷರುಗಳಾದ ಅಬ್ದುಲ್ ಲತೀಫ್ ದಲ್ಕಾಜೆ, ಕೇಶವ ಭಟ್ ಕಲ್ಲಸರ್ಪೆ, ಕೋಲ್ಪೆ ಮಸೀದಿ ಅಧ್ಯಕ್ಷರಾದ ಸೇಕಬ್ಬ ಹಾಜಿ, ಅಳಕೆಮಜಲು ಮಸೀದಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್, ಪ್ರಮುಖರಾದ ರಝಾಕ್ ಹಾಜಿ ಅಳಕೆಮಜಲು, ಮಹಮ್ಮದ್ ಕುಂಞಿ ಹಾಜಿ ಅಳಕೆಮಜಲು, ಇಲ್ಯಾಸ್, ಅನ್ಸಾರ್ ಕೆ.ಟಿ., ಮಹಮ್ಮದ್ ಶರೀಫ್ ಖಂದಕ್, ಹಕೀಂ ಖಂದಕ್, ತಕೀಯುದ್ದೀನ್ ಮಿತ್ತೂರು, ಮುನೀರ್ ಎಂ.ಕೆ., ಉಮ್ಮಾರ್ ಫಾರುಕ್ ಮಿತ್ತೂರು, ಹಂಝ ಮೈಕೆ, ಹಂಝ ಮಿತ್ತೂರು, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ಸ್ವಾಗತಿಸಿ, ಸಾದಿಕ್ ಮಿತ್ತೂರು ಅಕ್ಕರೆ ವಂದಿಸಿದರು.

LEAVE A REPLY

Please enter your comment!
Please enter your name here