ಸಂಸ್ಥೆ ಬೆಳೆಯುವಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು- ಜಯಸೂರ್ಯ ರೈ ಮಾದೋಡಿ
ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಇವರ ಅಧ್ಯಕ್ಷತೆಯಲ್ಲಿ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ದೀಕ್ಷಿತ್ ಕೆ ಜೆ ಬಂಡಾಜೆ, ಉಪಾಧ್ಯಕ್ಷೆಯಾಗಿ ಕೃಪಾ ಐ, ಪ್ರಧಾನ ಕಾರ್ಯದರ್ಶಿಯಾಗಿ ಸಂಸ್ಥೆಯ ಮುಖ್ಯಗುರು ಸರಸ್ವತಿ ಎಂ, ಕಾರ್ಯದರ್ಶಿಯಾಗಿ ಶ್ರವಣ್ ಸಾಮನಿ, ಜತೆ ಕಾರ್ಯದರ್ಶಿಯಾಗಿ ಶೋಭಿತ್ ರೈ ಎಂ ಮತ್ತು ಅಕ್ಷರ ಅಬಿಕಾರ, ಕೋಶಾಧಿಕಾರಿಯಾಗಿ ಲಿಖಿತ್ ರೈ ಎಸ್, ಸಕ್ರಿಯ ಸದಸ್ಯರುಗಳಾಗಿ ಲಕ್ಷ್ಮೀಸಾಗರ್, ಧನ್ಯಶ್ರೀ ಬಿ ವಿ, ವೇದಿತ್ ರೈ ಎಂ, ಜೀವನ್, ಶೋಭಿತ ಎನ್ ವಿ ,ಶಶಾಂಕ್ ರಾವ್, ಯಜ್ಞೇಶ್ ಐ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಗಿರಿಶಂಕರ ಸುಲಾಯ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ , ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಇವರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಗಿರಿಶಂಕರ ಸುಲಾಯ ಅವರು ನೆರವೇರಿಸಿ ಕೊಟ್ಟರು. ಹಿರಿಯ ವಿದ್ಯಾರ್ಥಿ ಸಂಘದ ಪ್ರಥಮ ಸಭೆಯನ್ನು ಹೇಮ ನಾಗೇಶ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಅವರು ಮಾತನಾಡುತ್ತಾ ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಆಧಾರ ಸ್ಠಂಬಗಳು, ಸಂಸ್ಥೆ ಬೆಳೆಯುವಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಿರಿಶಂಕರ್ ಸುಲಾಯ , ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಶ್ರವಣ್ ಸಾಮಾನಿ ಅವರ ಮಗಳು ಐರಾರವರ 2 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆ ಏರ್ಪಡಿಸಿದ್ದರು.
ಮುಖ್ಯಗುರು ಸರಸ್ವತಿ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು .
ಹಿರಿಯ ವಿದ್ಯಾರ್ಥಿಗಳಾದ ಸುಷ್ಮಾ ಕೆ ಎಸ್ ಮತ್ತು ಧನ್ಯಶ್ರೀ ಬಿ ವಿ ಪ್ರಾರ್ಥಿಸಿದರು. ವಿನಯ.ವಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕಿ ಅನಿತಾ ಜಿ ವಂದಿಸಿದರು.