ಲ್ಯಾಂಪ್ಸ್ ಸಹಕಾರ ಸಂಘದ 4ನೇ ಶಾಖೆ ಕಡಬದಲ್ಲಿ ಶುಭಾರಂಭ

0

ಪ.ಪಂಗಡದ ಸ್ವಾವಲಂಭಿ, ಸದೃಢ ಬದುಕಿಗೆ ಸಹಕಾರಿ ಸಂಘ ಪೂರಕ-ಭಾಗೀರಥಿ ಮುರುಳ್ಯ

ಪುತ್ತೂರಿನ ಲ್ಯಾಂಪ್ಸ್‌ನಿಂದ ಅದ್ಬುತ ಕಾರ್ಯ-ಮಂಜುನಾಥ ಎನ್.ಎಸ್:

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘದ 4ನೇ ಶಾಖೆ ಕಡಬದ ಹೃದಯ ಭಾಗದಲ್ಲಿರುವ ಜೆ.ಪಿ ಕಾಂಪ್ಲೆಕ್ಸ್‌ನಲ್ಲಿ ಮಾ.12ರಂದು ಶುಭಾರಂಭಗೊಂಡಿತು.
ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬಡತನದಿಂದ ಬಂದ ಸಮಾಜವು ಬಡತನದಲ್ಲೇ ಇರಬಾರದು ಎನ್ನುವುದನ್ನು ಪ.ಪಂಗಡದವರು ಸಹಕಾರಿ ಸಂಘದ ಮೂಲಕ ಸಾಬೀತುಪಡಿಸಿದೆ. ಪ.ಜಾತಿ. ಪ.ಪಂಗಡವರು ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿರುವ ಪಂಗಡವಾಗಿದೆ. ತಮ್ಮದೇ ಸಹಕಾರಿ ಸಂಸ್ಥೆಯ ಮೂಲಕ ಪ.ಪಂಗಡದವರು ಅಭಿವೃದ್ಧಿ ಹೊಂದುತ್ತಾ ಸಾವಲಂಬಿ, ಸದೃಡ ಬದುಕಿಗೆ ಸಹಕಾರಿಯಾಗಿದೆ. ಸಂಘದಲ್ಲಿ ಹೂಡಿಕೆ ಮಾಡುವ ಮೂಲಕ ಬಡತನದಲ್ಲಿರುವವರಿಗೆ ಬ್ಯಾಂಕ್‌ನಿಂದ ಸಹಕರಿಸಬೇಕು. ಆರ್ಥಿವಾಗಿ ಎಲ್ಲರಿಗೂ ಪ್ರಯೋಜನವಾಗುವಂತ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ. ಸಂಘದ ಮೂಲಕ ಸಾಲ ನೀಡುವುದು ಮಾತ್ರವಲ್ಲದೆ ನಮ್ಮಿಂದಾಗುವ ರೀತಿಯಲ್ಲಿ ಪ್ರೀತಿಯಿಂದ ಸಹಕಾರ ನೀಡುವ ಮೂಲಕ ಪಂಗಡದ ಅಭಿವೃದ್ಧಿಯಲ್ಲಿ ಸಹಕರಿಸಬೇಕು ಎಂದರು.



ಪುತ್ತೂರಿನ ಲ್ಯಾಂಪ್ಸ್‌ನಿಂದ ಅದ್ಬುತ ಕಾರ್ಯ-ಮಂಜುನಾಥ ಎನ್.ಎಸ್:
ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಮೈಸೂರು ಇದರ ಉಪಾಧ್ಯಕ್ಷ ಮಂಜುನಾಥ ಎನ್.ಎಸ್. ಮಾತನಾಡಿ, ಕಡಬದಲ್ಲಿ 42ನೇ ಸಹಕಾರಿ ಸಂಘವಾಗಿ ಲ್ಯಾಂಪ್ಸ್‌ನ ಶಾಖೆ ಪ್ರಾರಂಭಗೊಂಡಿದೆ. ಶಾಸಕರ ಉತ್ತಮ ಪ್ರೇರಣೆಯಿದೆ. ಇನ್ನಷ್ಟು ಸಹಕಾರಿ ಸಂಘಗಳೂ ಬಂದರೂ ಜನ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 23 ಲ್ಯಾಂಪ್ಸ್ ಸಹಕಾರಿ ಸಂಘಗಳಿದ್ದು ಬೆರಳಿನಿಕೆಯಷ್ಟು ಸಂಘಗಳು ಮಾತ್ರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪುತ್ತೂರಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವು ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದು ಸಂಘವು ಅದ್ಬುತವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಸಂಘ ಅಭಿವೃದ್ಧಿಯಲ್ಲಿ ಜನರ ಸಹಕಾರ ಅಗತ್ಯ ಎಂದರು.


ಜೆ.ಪಿ ಕಾಂಪ್ಲೆಕ್ಸ್‌ನ ಮ್ಹಾಲಕ ಜೋಶ್ ಪ್ರಕಾಶ್, ಸಂಘದ ಉಪಾಧ್ಯಕ್ಷ ಧರ್ಣಪ್ಪ ನಾಯ್ಕ, ನಿರ್ದೇಶಕರಾದ ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ, ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಪೆರಾಜೆ, ಮರ್ದಾಳ ಗ್ರಾ.ಪಂ ಅಧ್ಯಕ್ಷೆ ಪ್ರೇಮ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಅಣ್ಣಿ ನಾಯ್ಕ, ನೀಲಯ್ಯ ಮಲೆಕುಡಿಯ ಸೇರಿದಂತೆ ಹಲವು ಮಂದಿ ಪ್ರಮುಖ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here