ಪರಿವಾರದಿಂದ ಹೊರನಡೆದ ರಾಜಾರಾಮ್‌ ಭಟ್‌-ರಾಜಕೀಯ ನಿವೃತ್ತಿ ಘೋಷಣೆ

0

ಪುತ್ತೂರು: ಇನ್ನು ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯನಿರ್ವಹಿಸುವುದಿಲ್ಲ. ಸಕ್ರೀಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ರಾಜಾರಾಮ್‌ ಭಟ್‌ ತಿಳಿಸಿದ್ದಾರೆ.

ಫೇಸ್‌ ಬುಕ್‌ ಲೈವ್‌ ನಲ್ಲಿ ಮಾತನಾಡಿದ ಅವರು ಇಂದಿನಿಂದ ನಾನೊಬ್ಬ ಸ್ವತಂತ್ರ ಮತದಾರ. ಯಾವ ಪಕ್ಷದ, ಪರಿವಾರದ ವಕ್ತಾರನೂ ಅಲ್ಲ. ಯಾವುದೇ ಸಂಘಟನೆಗಳಲ್ಲಿಯೂ ಇನ್ನುಮುಂದೆ ನಾನು ಸದಸ್ಯನಾಗಿರುವುದಿಲ್ಲ. ವೈಯಕ್ತಿಕ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಾನು ಗುರುತಿಸಿಕೊಂಡಿದ್ದ ಪರಿವಾರ, ಸಂಘಟನೆಗೆ ಧಾರೆ ಎರೆದಿದ್ದೇನೆ ಆದರೆ ಇನ್ನು ಮುಂದೆ ಯಾವುದೇ ಸಂಘಟನೆಯೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇನ್ಮುಂದೆ ಯಾವ ಪಕ್ಷದ ವಕ್ತಾರನೂ ಅಲ್ಲ, ಸಂಘದ ವಕ್ತಾರನೂ ಅಲ್ಲ. ನಾನೊಬ್ಬ ಸ್ವತಂತ್ರ ಮತದಾರ | Rajaram Bhat

LEAVE A REPLY

Please enter your comment!
Please enter your name here