ಹೋಪ್ ಫೌಂಡೇಶನ್ ಮತ್ತು ಈ-ಫ್ರೆಂಡ್ಸ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಕೆಮ್ಮಾರದ ಕೈಕುಂಜಾ ಸೆಂಟರ್ ನಲ್ಲಿ ರಂಜಾನ್ ಕಿಟ್ ವಿತರಣೆ

0

ಉಪ್ಪಿನಂಗಡಿ: ಮಾ.9: ಹೋಪ್ ಫೌಂಡೇಶನ್ ಮತ್ತು ಈ-ಫ್ರೆಂಡ್ಸ್ ಪುತ್ತೂರು ವತಿಯಿಂದ ಕೆಮ್ಮಾರದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಕೆಮ್ಮಾರದ ಕೈಕುಂಜಾ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಪ್ ಫೌಂಡೇಶನ್ ನ ಸೈಫ್ ಸುಲ್ತಾನ್ ವಹಿಸಿದ್ದರು. ಧಾರ್ಮಿಕ ಮುಖಂಡರಾದ ಮೌಲಾನಾ ಜಾಫರ್ ಸ್ವಾದಿಕ್ ಫೈಝಿ ಕೆಮ್ಮಾರ ಇವರು ದುಆ ಆಶಿರ್ವಚನಗೈದರು.
ಹೋಪ್ ಫೌಂಡೇಶನ್ ಮತ್ತು ಈ ಫ್ರೆಂಡ್ಸ್ ಪುತ್ತೂರು ಸಾವಿರಾರು ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಪುತ್ತೂರು ಭಾಗದಲ್ಲಿ ಮುಂಚೂಣಿಯಲ್ಲಿರುವ ವಿಶೇಷ ಯುವಕರ ಸಂಘವಾಗಿದೆ ಎಂದು ವಕೀಲರಾದ ಕಬೀರ್ ಕೆಮ್ಮಾರ ಪರಿಚಯಿಸಿದರು.
ಹೋಪ್ ಫೌಂಡೇಶನ್ ಮತ್ತು ಈ-ಫ್ರೆಂಡ್ಸ್ ಇದರ ಕಾರ್ಯಚಟುವಟಿಕೆ ಮತ್ತು ಸದುದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಇಮ್ತಿಯಾಝ್ ಪಾರ್ಲೆ ಮಾತನಾಡಿದರು. ಈ ಒಂದು ಕಾರ್ಯಕ್ರಮವು ಉದ್ಯಮಿ ಕೆ.ಪಿ ಅತಾವುಲ್ಲಾ ಕೆಮ್ಮಾರ ಇವರ ಸಹಕಾರದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಹೋಪ್ ಫೌಂಡೇಶನ್ ನ ಅಫ್ತಾಬ್, ಈ- ಫ್ರೆಂಡ್ಸ್ ಅಧ್ಯಕ್ಷ ಆರಿಫ್ ಸಾಲ್ಮರ, ಇಜಾಝ್, ರಿಯಾಝ್, ಆಸಿಫ್ ಅಜ್ಜಿಕಟ್ಟೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ ಅಝೀಝ್ ಕೆಮ್ಮಾರ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here