ಮಾ.16-17 : ವೀರಮಂಗಲ ಕೈಲಾಜೆ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಪುನರ್‌ಪ್ರತಿಷ್ಟೆ ಹಾಗೂ ಬ್ರಹ್ಮಕಲಶ

0

ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಕೈಲಾಜೆ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ಮತ್ತು ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶವು ಮಾ.16ರಿಂದ ಮಾ.17ರವರೆಗೆ ದೈವಜ್ಞರಾದ ದಿನೇಶ್ ಪಣಿಕ್ಕರ್ ಸೋಮೇಶ್ವರ ಅವರ ಪ್ರಶ್ನಾಚಿಂತನೆಯ ಮುಖಾಂತರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಮಾ.16ರಂದು ಬೆಳಿಗ್ಗೆ 9.30ಕ್ಕೆ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆಯೊಂದಿಗೆ ರಕ್ತೇಶ್ವರಿ ದೈವದ ಎಲ್ಲಾ ಪರಿಕರಗಳನ್ನು ವಾದ್ಯಘೋಷ ಭಜನೆಯೊಂದಿಗೆ ದೇವಸ್ಥಾನಕ್ಕೆ ತರುವುದು.ಸಂಜೆ 6.30ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣ,ಪ್ರಾಸಾದಾದಿ ಬಿಂಬ ಪರಿಗ್ರಹ,ಸ್ವಸ್ತಿ ಪುಣ್ಯಾಹಾವಾಚನ,ಸ್ಥಳ ಶುದ್ಧಿ,ಪ್ರಾಸಾದ ಶುದ್ಧಿ ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾ ಬಲಿ,ನೂತನ ಬಿಂಬ ಜಲಾಧಿವಾಸ ,ಪ್ರಾಕಾರ ಬಲಿ,ಪ್ರಸಾದ ವಿತರಣೆ ನಡೆಯಲಿದೆ.

ಮಾ.17ರಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ,ಚಂಡಿಕಾಯಾಗ ಪ್ರಾರಂಭ,ಪಂಚವಿಂಶತಿ ಕಲಶ ಪೂಜೆ, ಬೆಳಿಗ್ಗೆ 10-25ರ ನಂತರ ವೃಷಭ ಲಗ್ನದ ಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿ ಮತ್ತು ಪಂಜುರ್ಲಿ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ ,ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ ,ತಂಬಿಲ ಸೇವೆ, ಮಂಗಳಾರತಿ,ಬೆಳಿಗ್ಗೆ 11.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ,ಸುವಾಸಿನಿ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕೈಲಾಜೆ ಕುಟುಂಬಸ್ಥರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here