ಪುತ್ತೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ ‘ಇನ್‌ಸ್ಪೈರ್ ಅವಾರ್ಡ್’ಗೆ 7 ನೇ ತರಗತಿಯ ಭಾರವಿ ಕೆ ಭಟ್ ಹಾಗೂ ಗಗನ್ ಆಯ್ಕೆಯಾಗಿದ್ದಾರೆ.
ಭಾರವಿ ಕೆ.ಭಟ್ “ಹೈ ವೋಲ್ಟೇಜ್ ಡಿಟೆಕ್ಟರ್” ಹಾಗೂ ಗಗನ್ ನೂಡಲ್ಸ್ ಮೇಕಿಂಗ್ ಮಷೀನ್ “ಎನ್ನುವ ಪರಿಕಲ್ಪನೆಯ ಸಲ್ಲಿಸಿ ಇನ್‌ಸ್ಪೈರ್ ಅವಾರ್ಡಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭಾರವಿ ಕೆ.ಭಟ್ ಡಾ. ರವಿಪ್ರಕಾಶ್ ಮತ್ತು ಡಾ ವಿಜಯ ಡಾ.ಸರಸ್ವತಿ ದಂಪತಿ ಪುತ್ರ. ಗಗನ್ ಚಂದ್ರಶೇಖರ ಬೆದ್ರಾಳ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ