ಪುತ್ತೂರು: ಐಬಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಮಾ.13ರಂದು ಪುತ್ತೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.ಸಂತ ಫೀಲೋಮಿನಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಝುಬೈರ್ ಮಾತನಾಡಿ ಯುವ ಸಂಘಟನೆಗಳು ಬಡವರ ಪರವಾಗಿ ಕಾರ್ಯ ನಿರ್ವಹಿಸಿದಾಗ ಬಡವರೂ ನೆಮ್ಮದಿಯ ಬದುಕನ್ನು ಕಾಣಬಹುದಾಗಿದೆ, ಈ ನಿಟ್ಟಿನಲ್ಲಿ ಐಬಿ ಸಂಸ್ಥೆಯವರ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ವಿದ್ಯಾರ್ಥಿ ಗೆಳೆಯರು ಸೇರಿ ಪ್ರಾರಂಭಿಸಿದ ಐಬಿ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾದಕ ವ್ಯಸನಗಳ ಬಗ್ಗೆಯೂ ನೀವು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಯುವಕರು ಸೇರಿಕೊಂಡು ಬಡವರ ಪರವಾಗಿ ಇಂತಹ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ, ತಮ್ಮ ಯುವತ್ವವನ್ನು ಒಳಿತಿನ ಕ್ಷೇತ್ರಗಳಲ್ಲಿ ವಿನಿಯೋಗಿಸಿದರೆ ನಮ್ಮ ಬದುಕು ಕೂಡಾ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಂತ ಫೀಲೋಮಿನಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಝುಬೈರ್ ಮಾತನಾಡಿ ಯುವ ಸಂಘಟನೆಗಳು ಬಡವರ ಪರವಾಗಿ ಕಾರ್ಯ ನಿರ್ವಹಿಸಿದಾಗ ಬಡವರೂ ನೆಮ್ಮದಿಯ ಬದುಕನ್ನು ಕಾಣಬಹುದಾಗಿದೆ, ಈ ನಿಟ್ಟಿನಲ್ಲಿ ಐಬಿ ಸಂಸ್ಥೆಯವರ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಅರ್ಹ ಬಡವರನ್ನು ಗುರುತಿಸಿ ರಂಝಾನ್ ಕಿಟ್ ನೀಡುತ್ತಿರುವ ಐಬಿ ಸಂಸ್ಥೆಯು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ. ಐಬಿ ಸಂಸ್ಥೆಯವರು ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮಾತನಾಡಿ ಐಬಿ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಬಡವರ ಪರವಾಗಿ ಕಾರ್ಯಾಚರಿಸುತ್ತಿದ್ದು ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖಿ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಐಬಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಆತೂರು ಮಾತನಾಡಿ 2014-17ನೇ ಸಾಲಿನ ಸಂತ ಫೀಲೋಮಿನಾ ಕಾಲೇಜಿನ ವಿದ್ಯಾರ್ಥಿಗಳ ಬಳಗದ ಸಂಘಟನೆ ನಮ್ಮದಾಗಿದ್ದು ನಮ್ಮ ಬಳಗದ ಗೆಳೆಯ ಇಹ್‌ತಿಶಾಂ ಎಂಬವರು ಅಕಾಲಿಕ ನಿಧನ ಹೊಂದಿದ ಬಳಿಕ ಆತನ ನೆನಪಿಗಾಗಿ `ಇಹ್‌ತಿಶಾಂ ಬ್ರದರ್‍ಸ್'(ಐ.ಬಿ) ಎನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಸಮಾಜಮುಖಿಯಾಗಿ ಕಾರ್ಯಾಚರಿಸುತ್ತಿದ್ದೇವೆ. ಕಳೆದ ವರ್ಷವೂ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಿದ್ದು ಮುಂದಕ್ಕೂ ಇದನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.
ಉಬಾರ್ ಡೋನರ್‍ಸ್ ಹೆಲ್ಪ್‌ಲೈನ್‌ನ ಅಧ್ಯಕ್ಷ ಶಬ್ಬೀರ್ ಕೆಂಪಿ, ಅಬ್ದುಲ್ ಹಮೀದ್ ಮಿತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಬಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಆತೂರು ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಸಲೀತ್ ಎ.ಕೆ ವಂದಿಸಿದರು. ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು. ಐಬಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.