ಮಾ.15: ರೋಟರಿ ಕ್ಲಬ್ ಪುತ್ತೂರುಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪುತ್ತೂರು; ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರುಗೆ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ರವರು ಮಾ. 15 ರಂದು ಅಧಿಕೃತ ಭೇಟಿ ನೀಡಿ ಕ್ಲಬ್ ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ ಕುಂಬ್ರ ಜಂಕ್ಷನ್ ನಲ್ಲಿ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರನ್ನು ರೋಟರಿ ಪುತ್ತೂರು ಕ್ಲಬ್ ಪದಾಧಿಕಾರಿಗಳು ಸ್ವಾಗತಿಸಲಿದ್ದಾರೆ. ಬಳಿಕ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಿರ್ಮಾಣಗೊಂಡ ರಂಗಮಂದಿರದ ಉದ್ಘಾಟನೆ, ಅಧ್ಯಕ್ಷ ಜೈರಾಜ್ ಭಂಡಾರಿರವರ ನಿವಾಸ ಕುರಿಯ ಇಲ್ಲಿ ಉಪಹಾರ, ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಭೇಟಿ, ಬಲ್ನಾಡು ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆಗೆ ಭೇಟಿ, ಕುಡಿಪಾಡಿ ಅಂಗನವಾಡಿ ಕೇಂದ್ರಕ್ಕೆ ಭೇಟಿ, ರೋಟರಿ ಪುತ್ತೂರು ಕ್ಲಬ್ ಪ್ರಾಯೋಜಕತ್ವದ ರೋಟರಿ ಪುತ್ತೂರು ಕಣ್ಣಿನ ಆಸ್ಪತ್ರೆಗೆ ಭೇಟಿ, ಡಯಾಲಿಸಿಸ್ ಸೆಂಟರ್ ಗೆ ಭೇಟಿ, ಅಪರಾಹ್ನ ಕ್ಲಬ್ ಅಸೆಂಬ್ಲಿ ಹೀಗೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಭಾಗಿಯಾಗಲಿದ್ದಾರೆ.

ಸಂಜೆ ಮರೀಲು ದಿ ಪುತ್ತೂರು ಕ್ಲಬ್ ನಲ್ಲಿ ಸಮಾರಂಭ ಕಾರ್ಯಕ್ರಮ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ಅಲ್ಲದೆ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿ’ಸೋಜರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here