ಉಪ್ಪಿನಂಗಡಿ ಕಂಬಳಕ್ಕೆ ವಿಶೇಷ ಮೆರಗು ನೀಡುವ ಜೋಡಣೆ
ಕಂಬಳದಲ್ಲಿ ವಿಜೇತರಿಗೆ ವಿಶೇಷ ಟ್ರೋಪಿ
ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವರ ಅನುಗ್ರಹ ಅಶೀರ್ವಾದ ಗಳಿಂದ, ಪದ್ಮವಿಭೂಷಣ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರು (ಧರ್ಮಾಧಿಕಾರಿಗಳು. ಶ್ರೀ ಕ್ಷೇತ್ರ ಧರ್ಮಸ್ಥಳ) ಇವರ ಶುಭಾಶೀರ್ವಾದಗಳೊಂದಿಗೆ ಮಾ.30 ಮತ್ತು 31ರಂದು ಉಪ್ಪಿನಂಗಡಿಯಲ್ಲಿ ವಿಜಯ ವಿಕ್ರಮ ಜೋಡುಕರೆ ಕಂಬಳ ನಡೆಯಲಿದೆ. ಈ ಭಾರಿ ವಿಶೇಷವಾಗಿ ಆಹಾರ, ಯಂತ್ರ,ಕೃಷಿ ಮೇಳ ನಡೆಯಲಿದೆ. ಅದರಲ್ಲೂ ವಿಶೇಷಾಗಿ ಉಪ್ಪಿನಂಗಡಿಯಲ್ಲಿ ಪ್ರವಾಸೋದ್ಯಮ ಚಿಂತನೆಯಲ್ಲಿ ಮಾದರಿ ಡ್ಯಾಮ್, ಹೊಳೆಗೆ ವಿದ್ಯುತ್ ದೀಪಗಳು, ಪ್ರಾಯೋಗಿಕ ಬೋಟಿಂಗ್ ಮಾಡಲಾಗುವುದು , ಜೊತೆಗೆ ಮಕ್ಕಳಿಗೆ ಆಟೋಟ ಸ್ಪರ್ದೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಉಮೇಶ್ ಶೆಣೈ, ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ, ಅಶೋಕ್ ಅರ್ಪಿನಗುತ್ತು, ಕೇಶವ ಭಂಡಾರಿ, ಶಿವರಾಮ ಶೆಟ್ಟಿ ಗೋಳ್ತಮಜಲು, ಯೋಗೀಶ್ ಸಾಮಾನಿ, ಕೃಷ್ಣಪ್ರಸಾದ್ ಬೊಳ್ಳಾವು, ಮಹಮ್ಮದ್ ಬಡಗನ್ನೂರು ಸಹಿತ , ಹೊಸ ಅಯೋಜನೆ ಅಯೋಜಕರಾದ ಸೊಯಬ್ ಮತ್ತು ರಾಜೇಶ್ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.