





ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾನೆಗೊಂಡು ಇದೀಗ 30ನೇ ವರ್ಷದ ದೈವಗಳ ನೇಮೋತ್ಸವವು ಮಾ.20 ರಂದು ನಡೆಯಲಿದೆ.


ಮಾ.20ರಂದು ಬೆಳಿಗ್ಗೆ ಉದಯ ನಾರಾಯಣ ಕಲ್ಲೂರಾಯ ಕೆ. ಸಂಪ್ಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಶ್ರೀ ಸತ್ಯದೇವತೆ ಕಲ್ಲುರ್ಟಿ ಹಾಗೂ ಗುಳಿಗ ದೈವದ ನೇಮ ನಡೆಯಲಿದೆ. ಮಾ.21ರಂದು ದೈವಗಳಿಗೆ ಅಗೇಲು ಸೇವೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.







            





