ಮುರುಳ್ಯ ನಿವಾಸಿಯ ಮೃತದೇಹ ಬಾವಿಯಲ್ಲಿ ಪತ್ತೆ ,ಸಾವಿನಲ್ಲಿ ಸಂಶಯ-ಮೃತರ ಮಗನಿಂದ ದೂರು

0

ಕಾಣಿಯೂರು:ವ್ಯಕ್ತಿಯೋರ್ವರ  ಮೃತದೇಹ ಬಾವಿಯಲ್ಲಿ ಪತ್ತೆಯಾಗಿದ್ದು ಮರಣದಲ್ಲಿ ಸಂಶಯವಿರುವುದಾಗಿ ಮಗ ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ.

ಮುರುಳ್ಯ ನಿವಾಸಿ ಚೆನ್ನಣ್ಣ ಗೌಡ ಮೃತಪಟ್ಟವರು.ಈ ಕುರಿತು ಅವರ ಮಗ ನವೀನ್ ಕುಮಾರ್ (47ವ) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.ಱತಂದೆ ಚೆನ್ನಣ್ಣ ಗೌಡ ಮತ್ತು ಚಿಕ್ಕಪ್ಪ ಪದ್ಮಯ್ಯ ಗೌಡರು ಒಂದೇ ಮನೆಯಲ್ಲಿ ವಾಸವಿರುವುದಾಗಿದೆ.ತಂದೆ ಪ್ರತಿದಿನ ಬೆಳಿಗ್ಗೆ ಉಪಾಹಾರ ಸೇವಿಸಲು ನನ್ನ ಮನೆಗೆ ಬರುತ್ತಿದ್ದರು.ಮಾ.೧೫ರಂದು ತಂದೆಯವರು ಒಬ್ಬರೇ ಮನೆಯಲ್ಲಿದ್ದು, ಪ್ರತಿ ದಿನದಂತೆ ಬೆಳಗ್ಗಿನ ಉಪಾಹಾರ ಸೇವಿಸಲು ನನ್ನ ಮನೆಗೆ ಆ ದಿನ ಬರದಿದ್ದುದರಿಂದ ನನ್ನ ಹೆಂಡತಿ ಕಾವ್ಯಶ್ರೀ ತಂದೆ ವಾಸವಿದ್ದ ಮನೆಗೆ ಹೋಗಿ ನೋಡಿದಾಗ ತಂದೆ ಚೆನ್ನಣ್ಣ ಗೌಡ ಅವರು ಮನೆಯಲ್ಲಿ ಕಾಣಲಿಲ್ಲ.

ಮನೆಯ ಸುತ್ತಮುತ್ತ ಹುಡುಕಾಡಿದಾಗ ಅಂಗಳದ ಸಮೀಪವಿರುವ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿರುವುದಾಗಿ ಕಾವ್ಯಶ್ರೀ ತಿಳಿಸಿದ್ದು, ಬಳಿಕ ತಾನು ಬಂದು ನೋಡಲಾಗಿ ತಂದೆ ಚೆನ್ನಣ್ಣ ಗೌಡರು ಬಾವಿಯಲ್ಲಿ ಬಿದ್ದು, ಮೃತಪಟ್ಟಿರುವಂತೆ ಕಂಡುಬಂದಿದೆೞ ಎಂದು ದೂರಿನಲ್ಲಿ ತಿಳಿಸಿದ್ದಾರೆ.ತಂದೆಯವರ ಮರಣದಲ್ಲಿ ಸಂಶಯವಿರುವುದಾಗಿಯೂ ಮಗ ನವೀನ್ ಕುಮಾರ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ 09/2024ಕಲಂ 174 (3)(IV)ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here