ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೈಂದಾಡಿ ಶಾಖೆಯು ನವೀಕೃತಗೊಂಡು ಹೊಸದಾಗಿ ಪ್ರಾರಂಭಗೊಂಡಿರುವ ಹಣಕಾಸು ವ್ಯವಹಾರಗಳೊಂದಿಗೆ ಮಾ.19ರಂದು ಶುಭಾರಂಭಗೊಂಡಿತು.
ಅರ್ಚಕ ಬಾಲಚಂದ್ರ ಶಗ್ರಿತ್ತಾಯ ನೇತೃತ್ವದಲ್ಲಿ ನಡೆದ ಗಣಪತಿ ಹೋಮ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾಖೆಯು ಶುಭಾರಂಭಗೊಂಡಿತು. ಸಂಘದ ಅಧ್ಯಕ್ಷ ನವೀನ್ ಡಿ., ಉಪಾಧ್ಯಕ್ಷೆ ಪವಿತ್ರ ಕೆ.ಪಿ., ನಿರ್ದೇಶಕರಾದ ದೇವಪ್ಪ ಓಲಾಡಿ, ಪ್ರವೀಣ್ ಶೆಟ್ಟಿ ಕುದುರೆಪ್ಪಾಡಿ, ಜಯರಾಮ ಪೂಜಾರಿ, ದೇವಪ್ಪ ಪಜಿರೋಡಿ, ಶಿವಪ್ರಸಾದ್ ಬಜಪ್ಪಳ, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯರಾದ ನಾಗಮ್ಮ ತೋಟ, ವಸಂತಿ ವೀರಮಂಗಲ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನ್ಯಾಯವಾದಿ ಶ್ಯಾಮ್ ಭಟ್ ಕೈಂದಾಡಿ, ಶ್ರೀಶ ಭೀಮಗುಳಿ, ಕೈಂದಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಎಸ್.ಪಿ ನಾರಾಯಣ ಗೌಡ ಪಾದೆ, ಮೋಹನ್ ಗೌಡ ಪಾದೆ, ಸೀತಾರಾಮ ಓಲಾಡಿ, ಜನಾರ್ದನ ಆಚಾರ್ಯ ಶಾಂತಿಗೋಡು, ರಾಜ್‌ಕಿರಣ್ ಕೂಡುರಸ್ತೆ, ಸುಬ್ರಾಯ ಶೆಟ್ಟಿ ಮಜಲು, ಪ್ರಭಾತ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
ಕೈಂದಾಡಿ ಶಾಖೆಯಲ್ಲಿ ಈ ತನಕ ಪಡಿತರ ಸಾಮಾಗ್ರಿ ಮಾತ್ರ ವಿತರಿಸಲಾಗುತ್ತಿತ್ತು. ಈಗ ಶಾಖೆಯು ನವೀಕೃತಗೊಂಡಿದ್ದು ಶಾಖೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಇನ್ನು ಮುಂದೆ ಎಲ್ಲಾ ರೀತಿಯ ಹಣಕಾಸು ವ್ಯವಹಾರಗಳನ್ನು ಪ್ರಾರಂಭಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.