ಪುತ್ತೂರು ಸೌಹಾರ್ದ ಸಹಕಾರಿಯಿಂದ ಶಶಿಕುಮಾರ್ ರೈಯವರಿಗೆ ಅಭಿನಂದನೆ

0

ಪುತ್ತೂರು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಸತತ 3 ನೆ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಪುತ್ತೂರು ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಪಿ.ಅಕ್ಕರೆ ರೈಯವರು ಅಭಿನಂದನಾ ಭಾಷಣ ಮಾಡಿ ಶಶಿಕುಮಾರ್ ರೈಯವರ ನಿರ್ದೇಶಕತ್ವದ ಅವಧಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇನ್ನಷ್ಟು ಉತ್ತುಂಗಕ್ಕೆ ಏರಲಿ ಆ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.


ಅಭಿನಂದನಾ ಸಭೆಯಲ್ಲಿ ನಿರ್ದೇಶಕರಾದ ಜಯರಾಮ ರೈ ಎ.ಕೆ, ರಾಮಯ್ಯ ರೈ, ಜಗನ್ನಾಥ ರೈ ಕೊಮ್ಮಂಡ, ಭಗವಾನ್‌ದಾಸ್ ರೈ, ಶೇಖರ್ ನಾರಾವಿ, ಮಹಮ್ಮದ್ ಕುಂಞ, ದೇವಪ್ಪ ನಾಯ್ಕ, ನಾರಾಯಣ ರೈ ಸಿ.ಎಚ್, ಆರ್.ಬಿ.ಸುವರ್ಣ, ಮೂಕಾಂಬಿಕಾ, ತ್ರಿವೇಣಿ ಕರುಣಾಕರ್, ಶ್ರೀಕೃಷ್ಣ ಭಟ್, ಮನಮೋಹನ್ ರೈ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಮಂಜುನಾಥ ರೈ ಸ್ವಾಗತಿಸಿದರು ಸಿಬ್ಬಂದಿಗಳಾದ ಚಿಂತನ್ ರೈ, ಪ್ರಸನ್ನ ರೈ ಸಹಕರಿಸಿದ್ದರು.

LEAVE A REPLY

Please enter your comment!
Please enter your name here