ಕೊಯಿಲ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ರಚನೆ – ಅಧ್ಯಕ್ಷರಾಗಿ ಪ್ರಕಾಶ್ ರೈ ಕೊಯಿಲ, ಕಾರ್ಯದರ್ಶಿಯಾಗಿ ವಸಂತ ಗೌಡ ಪಕ್ಯೋಡ್

0

ಬಡಗನ್ನೂರು: ಕೊಯಿಲ ಬಡಗನ್ನೂರು ಸ‌.ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆಯು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ಮಾ.18ರಂದು ನಡೆಯಿತು. 

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ರೈ ಕೊಯಿಲ, ಕಾರ್ಯದರ್ಶಿಯಾಗಿ  ವಸಂತ ಗೌಡ ಪಕ್ಯೋಡ್ ಇವರನ್ನು ಅಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ  ಸುಂದರ ನಾಯ್ಕ ತಲೆಂಜಿ,  ಜೊತೆ ಕಾರ್ಯದರ್ಶಿಯಾಗಿ ಪೂರ್ಣಿಮಾ ತಲೆಂಜಿ, ಕೋಶಾಧಿಕಾರಿಯಾಗಿ ಷರೀಫ್ ಕೊಯಿಲ ಇವರುಗಳನ್ನು ಅಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಶರತ್ ರಾಜ್ ರೈ ಕೊಯಿಲ, ನವೀನ್ ರೈ ಅಜ್ಜಿಕಲ್ಲು, ಜಯಕರ ರೈ ಬಡಕ್ಕಾಯೂರು, ಕೌಶಿಕ್ ಗೌಡ ಪಕ್ಯೋಡ್, ಚಂದ್ರಶೇಖರ್ ನಾಯ್ಕ ಕೊಡೆಂಕಿರಿ, ಜಲಜಾಕ್ಷಿ ಸಿ ಎಚ್ ಅವಿರೋಧವಾಗಿ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ ಬಿ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಬಳಿಕ ಅಯ್ಕೆಗೊಂಡ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಸಹ ಶಿಕ್ಷಕ ಗಿರೀಶ್ ಸ್ವಾಗತಿಸಿ ವಂದಿಸಿದರು.ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here