ನೆಲ್ಯಾಡಿ: ಸಾದಾತ್ ತಂಙಳ್, ಕಂಕನಾಡಿ ಉಸ್ತಾದ್ ಅನುಸ್ಮರಣೆ

0

ನೆಲ್ಯಾಡಿ: ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್ ನೆಲ್ಯಾಡಿ ಶಾಖೆಯ ವತಿಯಿಂದ ಅಗಲಿದ ಸಯ್ಯಿದ್ ಸಾದತ್ ತಂಙಳ್ ಹಾಗೂ ಶೈಖುನಾ ಕಂಕನಾಡಿ ಉಸ್ತಾದ್, ದಾವೂದ್ ಎನ್.ಪಿ. ಅನುಸ್ಮರಣೆ ಹಾಗೂ ಮಾಸಿಕ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನೆಲ್ಯಾಡಿ ಸುನ್ನಿ ಕಾರ್ಯಾಲಯದಲ್ಲಿ ನಡೆಯಿತು.
ದುವಾ ನೇತೃತ್ವವನ್ನು ಧಾರ್ಮಿಕ ವಿದ್ವಾಂಸರಾದ ಮೌಲಾನ ಶರೀಫ್ ಸಖಾಫಿ ನೆಲ್ಯಾಡಿ ವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್‌ವೈಎಸ್ ಅಧ್ಯಕ್ಷರಾದ ಮೌಲಾನಾ ಉಸ್ಮಾನ್ ಜೌಹರಿ ನೆಲ್ಯಾಡಿ ವಹಿಸಿದ್ದರು. ಮಲ್ಲಿ ಸಖಾಫಿ ಹೊಸಮಜಲು ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಹಫೀಝ್ ಮುಹೀನಿ ಮತ್ತು ಮುನೀರ್ ಎನ್.ಕೆ.ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್.ಹಮ್ಮಬ್ಬ, ಶಫೀಕ್ ಅಹ್ಸನಿ, ಮಾ| ಇರ್ಷಾದ್ ಕೆ.ಇ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಹನೀಫ್ ಕರಾವಳಿ, ನಿಝಾಮ್, ಫಾರೂಕ್ ಎನ್.ಕೆ., ಎಸ್ ಎಸ್‌ಎಫ್, ಎಸ್‌ವೈಎಸ್, ಕೆಎಂಜೆ ಪದಾಧಿಕಾರಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here