ಮಾ.23: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕ್ರ್ಯಾಶ್ ಕೋರ್ಸ್ ತರಗತಿಗಳು ಪ್ರಾರಂಭ

0

ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಾ.23ರಿಂದ ಕ್ರ್ಯಾಶ್ ಕೋರ್ಸ್ ತರಗತಿಗಳು ಆರಂಭವಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಈ ಕ್ರ್ಯಾಶ್ ಕೋರ್ಸ್ ತರಗತಿಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕ್ರ್ಯಾಶ್ ಕೋರ್ಸಿನಲ್ಲಿ ನೀಟ್, ಜೆಇಇ ಮತ್ತು ಸಿಇಟಿ ಪರೀಕ್ಷೆಗಳಿಗೆ ಅನುಭವೀ ಅಧ್ಯಾಪಕರಿಂದ ವಿಶೇಷ ತರಬೇತಿ ಇರಲಿದ್ದು, ಬಹು ಆಯ್ಕೆಯ ಪ್ರಶ್ನೆಗಳೊಂದಿಗೆ ವಿವರವಾದ ಪ್ರತಿ ಅಧ್ಯಾಯದ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಪ್ರತಿ ವಾರಾಂತ್ಯದಲ್ಲಿ ಮೋಕ್ ಟೆಸ್ಟ್‌ಗಳು ಇರಲಿದ್ದು ಫಲಿತಾಂಶವನ್ನು ತಕ್ಷಣವೇ ಪ್ರಕಟಿಸಲಾಗುವುದು. ಕೈಗೆಟಕುವ ಶುಲ್ಕದೊಂದಿಗೆ ಉತ್ತಮ ಫಲಿತಾಂಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ತಕ್ಷಣ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 8217036575, 9902637451 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here