ಪುತ್ತೂರು ಜಾತ್ರೋತ್ಸವಕ್ಕೆ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿಚ್ಚಿಸುವರಿಗೆ ಅರ್ಜಿ ಆಹ್ವಾನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎ.10 ರಿಂದ 20 ರ ತನಕ ನಡೆಯಲಿದ್ದು, ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಚಿತವಾಗಿ ಸೇವಾ ರೂಪದಲ್ಲಿ ನಡೆಸಲು ಇಚ್ಚಿಸುವವರು ದೇವಳದ ಕಚೇರಿಗೆ ಅರ್ಜಿ ನೀಡುವಂತೆ ತಿಳಿಸಲಾಗಿದೆ.

ಅರ್ಜಿಯಲ್ಲಿ ಸಂಸ್ಥೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕಾರ್ಯಕ್ರಮದ ವಿವರ, ತಂಡದಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನಮೂದಿಸಬೇಕು. ತಂಡಗಳು ನೀಡುವ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯದ್ದಾಗಿದ್ದು, ಪಾಶ್ಚಾತ್ಯ ಶೈಲಿಗೆ ಅವಕಾಶವಿರುವುದಿಲ್ಲ. ಆಸಕ್ತರು ಮಾ.25ರ ಒಳಗೆ ಅರ್ಜಿಯನ್ನು ದೇವಳದ ಕಚೇರಿಗೆ ನೀಡುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448732414 ಅನ್ನು ಸಂಪರ್ಕಿಸುವುದು. ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದೆಂದು ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here