ಈಶ್ವರಮಂಗಲ : ಅಡೂರು ಕ್ಷೇತ್ರದ ಜಾತ್ರೋತ್ಸವದ ಅಂಗವಾಗಿ ನಡೆಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾಲಿನಲ್ಲಿ “ಶರಸೇತು ಭಂಗ” ಯಕ್ಷಗಾನ ತಾಳಮದ್ದಲೆ, ಪ್ರಸಿದ್ಧ ಕಲಾವಿದರಿಂದ ನಡೆದು ನೆರೆದ ಜನಮನ ರಂಜಿಸಿತು.
ಭಾಗವತರಾಗಿ ಮೆಣಸಿನಕಾನ ಮೋಹನ, ಚೆಂಡೆಮದ್ದಳೆವಾದಕರಾಗಿ ಟಿ. ಗೋಪಾಲಕೃಷ್ಣ ಭಟ್, ತೆಂಕಬೈಲು, ವಿಷ್ಣು ಶರಣ ಬನಾರಿ ಭಾಗವಹಿಸಿದ್ದರು. ಪಾತ್ರ ವರ್ಗದಲ್ಲಿ ಶ್ರೀ ಕೃಷ್ಣನಾಗಿ ದೇವಸ್ಯ ಜಯರಾಮ, ಅರ್ಜುನನಾಗಿ ಪ್ರೋಫೆಸರ್ ವೆಂಕಟ್ರಾಂ ಭಟ್ ಸುಳ್ಯ, ಹನುಮಂತನಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ ಭಾಗವಹಿಸಿ ಯಕ್ಷಗಾನ ಕೂಟವು ಜನಮೆಚ್ಚುಗೆಗೆ ಪಾತ್ರವಾಯಿತು. ಯಕ್ಷಗುರು ವಿಶ್ವ ವಿನೋದ ಬನಾರಿ ಭಾಗವಹಿಸಿ ನಿರ್ದೇಶಿಸಿದರು. ಆರಂಭದಲ್ಲಿ ಉತ್ಸವ ಸಮಿತಿ ಸದಸ್ಯ ಕೃಷ್ಣಪ್ಪ ಮಾಸ್ತರ್ ಸ್ವಾಗತಿಸಿ ಕೊನೆಯಲ್ಲಿ ಕಾರ್ಯಕ್ರಮದ ಸಂಯೋಜಕ ಬೆಳ್ಳಿಪಾಡಿ ಸದಾಶಿವ ರೈ ವಂದಿಸಿದರು.