ಹಿರೇಬಂಡಾಡಿ: ಜಾಗದ ತಕರಾರು-ಹಲ್ಲೆ

0

ಪುತ್ತೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಅಕ್ಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಹಿರೆಬಂಡಾಡಿ ಹೊಸಗದ್ದೆ ನಿವಾಸಿ ಸದಾಶಿವ ರೈ(52ವ.)ಎಂಬವರು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾ.19ರಂದು ಸಂಜೆ ಮನೆಯಲ್ಲಿದ್ದ ಸಮಯ ಅಕ್ಕ ಸರಸ್ವತಿ ಯಾನೆ ಅನಸೂಯ ರೈಯವರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಬ್ಬರ್ ಮರದ ಹಸಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಂಗಿ ರೇಖಾ ರೈ ಬಂದು ಹಲ್ಲೆ ತಡೆದಿರುತ್ತಾರೆ. ಬಳಿಕ ರೇಖಾ ರೈಯವರು ಹಲ್ಲೆ ವಿಚಾರವನ್ನು ಬಾಲಕೃಷ್ಣ ರೈಯವರಿಗೆ ತಿಳಿಸಿದ್ದು ಅವರು ಮನೆಗೆ ಬಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿದ್ದಾರೆ. ನನ್ನ ಮನೆಯ ಬಳಿ ಸರಕಾರದಿಂದ ಅಕ್ರಮ ಸಕ್ರಮದಲ್ಲಿ ಮಂಜೂರು ಆಗಿರುವ ಜಮೀನಿನ ರಿಪ್ಲಾಂಟೇಶನ್ ಮಾಡಲು ಸದ್ರಿ ಜಮೀನಿನಲ್ಲಿದ್ದ ರಬರ್ ಗಿಡಗಳನ್ನು ಕಡಿಯುತ್ತಿರುವುದನ್ನು ನಿಲ್ಲಿಸಬೇಕು ಹಾಗೂ ಹಿರಿಯರ ಜಮೀನಿನ ಪಾಲಿನ ವಿಚಾರದಲ್ಲಿರುವ ತಕರಾರೇ ಹಲ್ಲೆಗೆ ಕಾರಣವಾಗಿದೆ ಎಂದು ಸದಾಶಿವ ರೈ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:34/2024, ಕಲಂ: 504,324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here