





ಪುತ್ತೂರು: ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಶ್ರೀ ಕ್ಷೇತ್ರ ಹನುಮಗಿರಿಗೆ ಭೇಟಿ ನೀಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.



ಈ ಸಂದರ್ಭದಲ್ಲಿ ಈಶ್ವರಮಂಗಲದ ಮಿಥುನ್ ಕುಮಾರ್ ಎಂಬವರು ಪೆನ್ಸಿಲ್ ನಲ್ಲಿ ರಚಿಸಿದ ಚೌಟ ಅವರ ಛಾಯಾಚಿತ್ರವನ್ನು ನೀಡಲಾಯಿತು. ಭೇಟಿ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ್ತ ಮೂಡೆತ್ತಾಯ, ಧರ್ಮದರ್ಶಿ ಶಿವರಾಂ.ಪಿ, ನಾಗರಾಜ್ ನಡುವಡ್ಕ, ರಾಧಾಕೃಷ್ಣ ಆಳ್ವ, ಸಹಜ್ ರೈ ಬಳಜ, ಆರ್ ಸಿ ನಾರಾಯಣ್, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ಮೀನಾಕ್ಷಿ ಶಾಂತಿಗೋಡು, ಗೌರಿ, ಚನಿಲ ತಿಮ್ಮಪ್ಪ ಶೆಟ್ಟಿ, ನಿತೀಶ್ ಶಾಂತಿವನ ಉಪಸ್ಥಿತರಿದ್ದರು.












